ಶಾರುಖ್ ಖಾನ್‌ಗೆ ಪೆಟ್ಟು; ಲಾಸ್ ಏಂಜೆಲೀಸ್‌ನಲ್ಲಿ ಶೂಟಿಂಗ್ ವೇಳೆ ಘಟನೆ

Shahrukh
Published on

ಲಾಸ್ ಏಂಜೆಲೀಸ್: ಶಾರುಖ್ ಖಾನ್ ಈ ವರ್ಷ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಅಟ್ಲೀ ನಿರ್ದೇಶನದ ‘ಜವಾನ್’, ರಾಜಕುಮಾರ್ ಹಿರಾನಿ ನಿರ್ದೇಶನದ ‘ಡುಂಕಿ’ ಹಾಗೂ ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’ ಹೀಗೆ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಶಾರುಖ್ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಪ್ರಾಜೆಕ್ಟ್ ಒಂದರ ಶೂಟಿಂಗ್ ವೇಳೆ ಸೆಟ್‌ನಲ್ಲಿ ಶಾರುಖ್ ಖಾನ್ ಮೂಗಿಗೆ ಪೆಟ್ಟು ಬಿದ್ದಿದೆ.

ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂಗಿಗೆ ಸರ್ಜರಿ ಮಾಡಲಾಗಿದೆ. ಕೆಲ ಕಾಲ ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಂಡಿರುವ ‘ಪಠಾಣ್’ ನಟ ಶೂಟಿಂಗ್‌ಗೆ ವಾಪಸ್ಸಾಗಿದ್ದಾರೆ. ಅವರು ಮೂಗಿಗೆ ಬ್ಯಾಂಡೇಜ್ ಹಾಕಿಕೊಂಡಿರುವ ಫೋಟೋ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮತ್ತೊಂದೆಡೆ ಶಾರುಖ್ ಕುರಿತು ಸುಳ್ಳು ಸುದ್ದಿಗಳೂ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಅಪಘಾತದಿಂದಾಗಿ ಶಾರುಖ್ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವರ ಬೆನ್ನಿಗೆ, ಮುಖಕ್ಕೆ ತೀವ್ರ ಪೆಟ್ಟು ಬಿದ್ದಿದ್ದು, ಬಾಲಿವುಡ್ ನಿರ್ಮಾಪಕರು, ಅಭಿಮಾನಿಗಳು ಆತಂಕಕ್ಕೀಡಾಗುವ ಭಯದಲ್ಲಿ ಶಾರುಖ್ ಆಪ್ತರು ನಿಜ ವಿಷಯ ಮುಚ್ಚಿಡುತ್ತಿದ್ದಾರೆ ಅಂತೆಲ್ಲ ೇಕ್ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net