ಗಣೇಶ್ ಆಚಾರ್ಯ ಮಾತ್ರವೇ ಅಲ್ಲದೆ ಅವರ ಸಹಾಯಕನ ಮೇಲೂ ಮಹಿಳೆ ದೂರು ದಾಖಲಿಸಿದ್ದರು. ಅಸಭ್ಯವಾಗಿ ಸ್ಪರ್ಶಿಸುವುದು, ಹಿಂಬಾಲಿಸುವುದು, ಲೈಂಗಿಕ ದೃಷ್ಟಿಯಿಂದ ನೋಡುವುದು ಸೇರಿ ಇತರೆ ಆರೋಪಗಳನ್ನು ಮಾಡಿದ್ದರು. ಚಾರ್ಜ್ ಶೀಟ್ ದಾಖಲಾಗಿರುವ ಬಗ್ಗೆ ಮಾತನಾಡಿರುವ ನೃತ್ಯ ನಿರ್ದೇಶಕ ಗಣೇಶ್ ಅವರ ವಕೀಲ ರವಿ ಅವರು, ''ನನಗೆ ಚಾರ್ಜ್ ಶೀಟ್ ಇನ್ನೂ ಸಿಕ್ಕಿಲ್ಲ. ಹಾಗಾಗಿ, ಈ ಬಗ್ಗೆ ಈಗಲೇ ಏನೂ ಮಾತನಾಡಲಾರೆ. ಆದರೆ, ಎಫ್‌ಐಆರ್‌ನಲ್ಲಿ ಇರುವ ಎಲ್ಲ ಸೆಕ್ಷನ್‌ಗಳು ಜಾಮೀನು ನೀಡಬಹುದಾದವುಗಳೇ ಆಗಿವೆ'', ಎಂದು ಮಾದ್ಯಮಗಳಿಗೆ ತಿಳಿಸಿದ್ದಾರೆ.