ಪುನೀತ್ ಫ್ಯಾನ್ಸ್​ಗೆ ಸರಣಿ ಸಿಹಿಸುದ್ದಿ

Puneeth
Published on

ಬೆಂಗಳೂರು: ‘ಪವರ್​ಸ್ಟಾರ್’ ಪುನೀತ್ ರಾಜ್​ಕುಮಾರ್ ಅಭಿಮಾನಿಗಳಿಗೆ ಈ ವರ್ಷ ಖುಷಿ ಪಡಲು ಅನೇಕ ಕಾರಣಗಳು ಸಿಗುವ ಸಾಧ್ಯತೆಗಳಿವೆ. ಏಕೆಂದರೆ ಅವರ ನೆಚ್ಚಿನ ನಟ ಈ ವರ್ಷ ಹಲವಾರು ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಸುಳಿವು ನೀಡಿದ್ದಾರೆ.

2017ರಲ್ಲಿ ಪುನೀತ್ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಯಾದರೂ 2018ರಲ್ಲಿ ಅವರ ಅಭಿನಯದಲ್ಲಿ ಒಂದೂ ಸಿನಿಮಾ ತೆರೆ ಕಂಡಿರಲಿಲ್ಲ. ಇನ್ನು 2019ರಲ್ಲಿ ಅಭಿಮಾನಿಗಳನ್ನು ರಂಜಿಸಲು ಬಂದಿದ್ದು ‘ನಟಸಾರ್ವಭೌಮ’ ಮಾತ್ರ. 2020ರಲ್ಲಿ ಕೂಡ ಸದ್ಯಕ್ಕೆ ಬರಲಿರುವುದು ‘ಯವರತ್ನ’ ಒಂದೇ. ಇದೀಗ ಚೇತನ್​ಕುಮಾರ್ ನಿರ್ದೇಶನದ ‘ಜೇಮ್್ಸ’ ಸಿನಿಮಾದ ಮುಹೂರ್ತ ಮುಗಿಸಿಕೊಂಡಿರುವ ಅವರು ಈ ವರ್ಷ ಸುಮಾರು ನಾಲ್ಕು ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಕಳೆದ ವರ್ಷ ನಿಮ್ಮ ಅಭಿನಯದಲ್ಲಿ ಒಂದೇ ಸಿನಿಮಾ ತೆರೆ ಕಂಡಿತ್ತು. ಈ ವರ್ಷ ಹೆಚ್ಚಿನ ಸಿನಿಮಾಗಳಲ್ಲಿ ನಟಿಸುವ ಯೋಜನೆ ಇದೆಯಾ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸದ್ಯ ‘ಯುವರತ್ನ’ ಮುಗಿಯತ್ತಿದೆ, ‘ಜೇಮ್್ಸ’ ಆರಂಭವಾಗಿದೆ. ಅದಾದ ಮೇಲೆ ನಮ್ಮದೇ ಪ್ರೊಡಕ್ಷನ್​ನಲ್ಲಿ ಒಂದು ಸಿನಿಮಾ ಆಗಲಿದೆ. ಇನ್ನೊಂದು ಚಿತ್ರದ ಬಗ್ಗೆ ಮಾತುಕತೆ ನಡೆಯುತ್ತಿದೆ. ಅದಾದ ಬಳಿಕ ಮತ್ತೊಂದು ಸಿನಿಮಾ ಮಾಡುವುದಿದೆ’ ಎಂದು ಹೇಳಿದ್ದಾರೆ. ‘ಯುವರತ್ನ’ ಶೀಘ್ರದಲ್ಲೇ ಬಿಡುಗಡೆ ಆಗಲಿದ್ದರೆ, ‘ಜೇಮ್್ಸ’ ಈ ವರ್ಷದ ಅಂತ್ಯದ ಒಳಗೆ ಮುಗಿಸುವ ಗುರಿ ಇರಿಸಿಕೊಂಡಿದೆ ಚಿತ್ರತಂಡ. ಈ ಮಧ್ಯೆ ಪುನೀತ್ ಉಳಿದ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಹೀಗಾಗಿ ಒಟ್ಟು ನಾಲ್ಕೈದು ಸಿನಿಮಾಗಳಾಗು ವುದರಿಂದ ಮುಹೂರ್ತ, ಟೀಸರ್, ಟ್ರೇಲರ್, ಆಡಿಯೋ ಎಂದು ಪವರ್​ಸ್ಟಾರ್ ಪದೇಪದೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net