ಸಮಂತಾಳನ್ನು ಆ ರೀತಿ ನೋಡಿ ನನ್ನ ಕಣ್ಣಲ್ಲಿ ನೀರು ಬಂತು! ಹೀಗ್ಯಾಕಂದ್ರು ಶೋಭಿತಾ ಧೂಳಿಪಲ | Sobhita Dhulipala

Sobhita Dhulipala
Published on

ಹೈದರಾಬಾದ್​: ನಟಿ ಶೋಭಿತಾ ಧೂಳಿಪಲ ( Sobhita Dhulipala ) ಶೀಘ್ರದಲ್ಲೇ ನಟ ನಾಗಚೈತನ್ಯ ( Naga Chaitanya ) ಜೊತೆ ಹಸೆಮಣೆ ಏರಲಿದ್ದು, ಅಕ್ಕಿನೇನಿ ಕುಟುಂಬದ ಸೊಸೆಯಾಗಲಿದ್ದಾರೆ. ಒಂದೆಡೆ ಸಿನಿಮಾ ಮಾಡುತ್ತಲೇ ಮತ್ತೊಂದೆಡೆ ವೆಬ್ ಸರಣಿಗಳಲ್ಲೂ ಶೋಭಿತಾ ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರು ಹಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಮಾಧ್ಯಮ ಸಂದರ್ಶನ ನೀಡಿದ ಶೋಭಿತಾ, ನಾಗಚೈತನ್ಯ ಜೊತೆಗಿನ ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.

ನಾನು ಹುಟ್ಟಿದ್ದು ಆಂಧ್ರಪ್ರದೇಶದ ತೆನಾಲಿಯಲ್ಲಿ. ನನ್ನ ತಂದೆ ವೈಜಾಗ್‌ನಲ್ಲಿ ನೇವಿ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರಿಂದ ನಾನು ಅಲ್ಲಿಯೇ ಬೆಳೆದೆ. ನನ್ನಮ್ಮ ಶಿಕ್ಷಕಿ ಆಗಿದ್ದರಿಂದ ಪುಸ್ತಕಗಳೇ ಹೆಚ್ಚಾಗಿ ಇದ್ದುದರಿಂದ ನಾನು ಓದುವುದನ್ನೇ ಹವ್ಯಾಸವನ್ನಾಗಿಸಿಕೊಂಡೆ. ನಾನು ಓದಿದ ಮೊದಲ ಪುಸ್ತಕ 'ಬುಡುಗು' ಎಂದು ಹೇಳಿದರು.

ನಾನು ಕಾಲೇಜಿಗೆ ಸೇರಿದಾಗ ಬಹಳಷ್ಟು ಹಣಕಾಸಿನ ಸುದ್ದಿಗಳನ್ನು ಕೇಳುತ್ತಿದ್ದೆ ಮತ್ತು ಓದುತ್ತಿದ್ದೆ. ಹೀಗಾಗಿ ನಾನು ಭಾರತದ ರಾಷ್ಟ್ರಪತಿಗಳ ಮುಖ್ಯ ಆರ್ಥಿಕ ಸಲಹೆಗಾರಳಾಗಿ ಕೆಲಸ ಮಾಡುವ ಕನಸು ಕಂಡಿದ್ದೆ. ಮುಂಬೈನಲ್ಲಿ ಪದವಿ ಓದುತ್ತಿದ್ದಾಗ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ನಂತರ ಮಾಡೆಲಿಂಗ್ ವೃತ್ತಿಯನ್ನು ಪ್ರಾರಂಭಿಸಿದೆ ಎಂದರು.

ನನ್ನ ತಂಗಿ ಸಮಂತಾ ( Samantha ) ಅಂದರೆ ನನಗೆ ತುಂಬಾ ಇಷ್ಟ. ಆಕೆ ನನ್ನ ಆತ್ಮ ಸಂಗಾತಿ. ಇತ್ತೀಚೆಗೆ ಸಮಂತಾ ಮದುವೆಯಾದಳು. ಸಿನಿಮಾ ಶೂಟಿಂಗ್‌ಗಳಲ್ಲಿ ಬಿಜಿಯಾಗಿರುವ ನಾನು ಬಹಳ ದಿನಗಳಿಂದ ಕುಟುಂಬ ಮತ್ತು ಸಂಬಂಧಿಕರಿಂದ ದೂರ ಉಳಿದಿದ್ದೇನೆ. ಸಮಂತಾ ಮದುವೆಯಲ್ಲಿ ಮತ್ತೆ ಎಲ್ಲರನ್ನೂ ಭೇಟಿಯಾದೆ. ನನ್ನ ತಂಗಿ ಸಮಂತಾ ಮದುವೆ ಮಂಟಪದಲ್ಲಿ ವಧುವಿನಂತೆ ಕುಳಿತಿದ್ದನ್ನು ಕಂಡಾಗ ಸಂತೋಷದಿಂದ ನನ್ನ ಕಣ್ಣಲ್ಲಿ ನೀರು ಸುರಿಯಿತು ಎಂದು ಶೋಭಿತಾ ತಿಳಿಸಿದರು. ಅಂದಹಾಗೆ ಶೋಭಿತಾಗೆ ಸಮಂತಾ ಹೆಸರಿನ ಸಹೋದರಿ ಇದ್ದಾರೆ. ನಟಿ ಸಮಂತಾ ಬೇರೆ, ಶೋಭಿತಾ ಸಹೋದರಿ ಸಮಂತಾ ಬೇರೆ.

Sobhita Dhulipala

ನನಗೆ ಬಹಳ ಭಕ್ತಿ ಇದೆ. ಮುಂಜಾನೆಯೇ ಪೂಜೆ ಮಾಡಿ ಸೂರ್ಯಾಷ್ಟಕವನ್ನು ಓದುವುದು ಅಭ್ಯಾಸ. ನಾನು ಸಂಪೂರ್ಣ ಸಸ್ಯಾಹಾರಿ. ಪುಳಿಹೊಗರೆ ಅಂದರೆ ಇಷ್ಟ. ಚಿಕ್ಕಂದಿನಿಂದಲೂ ನನಗೆ ತಾಯಿಯಾಗಬೇಕೆಂಬ ಆಸೆ ಇತ್ತು. ಅಮ್ಮ ಎಂದು ಕರೆದಾಗ ತಾಯ್ತನದ ಮಾಧುರ್ಯ ನನಗೆ ಅದ್ಭುತವೆನಿಸುತ್ತದೆ ಎಂದರು ಶೋಭಿತಾ, ನಾಗಚೈತನ್ಯ ಬಗ್ಗೆ ಹೇಳುವುದಾದರೆ, ಅವರು ತುಂಬಾ ಸಭ್ಯರು ಮತ್ತು ತುಂಬಾ ಒಳ್ಳೆಯವರು. ತುಂಬಾ ಸಮಚಿತ್ತದಿಂದ ವರ್ತಿಸುತ್ತಾರೆ. ಯಾವಾಗಲೂ ಶಾಂತ ಮತ್ತು ಕೂಲ್​ ಆಗಿರುತ್ತಾರೆ. ಈ ಗುಣಗಳೇ ಅವನ ಪ್ರೀತಿಯಲ್ಲಿ ಬೀಳುವಂತೆ ಮಾಡಿತು ಎಂದು ಶೋಭಿತಾ ಹೇಳಿದ್ದಾರೆ.

ಅಂದಹಾಗೆ ನಾಗಚೈತನ್ಯ ಹಾಗೂ ಶೋಭಿತಾ ಪ್ರೀತಿ ಮಾಡುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಹಲವು ಬಾರಿ ಹರಿದಾಡಿತ್ತು. ಅಲ್ಲದೆ, ಇಬ್ಬರೂ ಜೊತೆಯಾಗಿ ಹಲವು ಬಾರಿ ವಿದೇಶ ಪ್ರವಾಸ ಕೂಡ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಚೈತನ್ಯ ಆಗಲಿ ಶೋಭಿತಾ ಆಗಲಿ ತಮ್ಮ ಪ್ರೀತಿಯ ಬಗ್ಗೆ ಒಮ್ಮೆಯೂ ಬಾಯ್ಬಿಟ್ಟಿರಲಿಲ್ಲ. ಆದರೆ, ಕಳೆದ ಆಗಸ್ಟ್​ 8ರಂದು ಈ ಪ್ರೇಮ ಪಕ್ಷಿಗಳು ನಿಶ್ಚಿತಾರ್ಥ ಮಾಡಿಕೊಂಡು ಪ್ರೇಮ ವದಂತಿಗಳಿಗೆ ಅಧಿಕೃತ ಮುದ್ರೆಯನ್ನು ಒತ್ತಿದರು.

2021ರಲ್ಲಿ ವಿಚ್ಛೇದನ

ಸುದೀರ್ಘ ಡೇಟಿಂಗ್​ ಬಳಿಕ 2017ರಲ್ಲಿ ಸಮಂತಾ ಮತ್ತು ನಾಗಚೈತನ್ಯ ವಿವಾಹವಾದರು. ಸಮಂತಾ ಕೂಡ ಪತಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಅಭಿಮಾನಿಗಳಿಂದ ಆದರ್ಶ ದಂಪತಿಗಳೆಂದು ಪರಿಗಣಿಸಲ್ಪಟ್ಟ ಸಮಂತಾ ಮತ್ತು ನಾಗಚೈತನ್ಯ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವಕ್ಕೂ ಮೊದಲೇ ಡಿವೋರ್ಸ್​ ಘೋಷಣೆ ಮಾಡಿದರು. 2021ರಲ್ಲಿ ವಿಚ್ಛೇದನ ಪಡೆದ ನಂತರ, ಸಮಂತಾ ಚಲನಚಿತ್ರಗಳಲ್ಲಿ ಸಕ್ರಿಯರಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net