

ಸೀನ್ ಸಿನಿಮಾಗೆ ಸಿನಿ ಪ್ರೇಮಿಗಳು ಫಿದಾ, ದೃಶ್ಯ, ಡೈರೆಕ್ಷನ್, ಸೂರ್ಯ, ನೆಸ್ಲೆನ್ ನಟನೆ ಅದ್ಭುತ ಎಂದು ಪೋಸ್ಟ್.
ಸ್ಟಾರ್ಡಮ್ನಿಂದ ಕೆಟ್ಟ ಸಿನಿಮಾ ಮಾಡುತ್ತಿರುವ ನಿರ್ದೇಶಕರು, ನಿರ್ಮಾಪಕರು ನೋಡಲೇಬೇಕಾದ ಸಿನಿಮಾ ಎಂದ ನೆಟ್ಟಿಗರು.
ತನಿಖೆ ನಡೆಸುವ ದೃಶ್ಯಗಳು, ಕತೆ ಕಟ್ಟಿರುವುದು ನೀರಸವಾಗಿದೆ ಎಂದು ಪ್ರತಿಕ್ರಿಯೆ.
Scene X Review: ರೋಮಾಂಚಮ್, ಆವೇಶಂ ಬ್ಲಾಕ್ ಬ್ಲಸ್ಟರ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಜಿತು ಮಾಧವನ್ ಆಕ್ಷನ್ ಕಟ್ ಹೇಳಿರುವ 'ಸೀನ್' ನ.6ರಂದು ರಿಲೀಸ್ ಆಗಿದೆ. ನಟ ಸೂರ್ಯಗೆ ಇದು ಹ್ಯಾಟ್ರಿಕ್ ಹಿಟ್ ಕೊಡುವ ಸಿನಿಮಾವಾಗಿದ್ದರೆ, 12 ವರ್ಷಗಳ ನಂತರ ಕಾಲಿವುಡ್ಗೆ ಎಂಟ್ರಿ ಕೊಟ್ಟ ನಟಿ ನಜ್ರಿಯಾಗೆ ಇದು ಉತ್ತಮ ಕಂಬ್ಯಾಕ್ ಸಿನಿಮಾವಾಗಿರಲಿದೆ. ಈಗಾಗಲೇ ಥಿಯೇಟರ್ನಲ್ಲಿ ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಸೂರ್ಯಾ ಅವರಿಗೆ ಈ ಸಿನಿಮಾ ಮತ್ತೊಂದು ಹಿಟ್ ತಂದುಕೊಟ್ಟಿದೆ. ಸೂರ್ಯ ಮತ್ತು ನಸ್ಲೆನ್ ನಟನೆ, ಕಾಂಬಿನೇಷನ್ ಚೆನ್ನಾಗಿದೆ. ನೋಡಬಹುದಾದ ಸಿನಿಮಾ, ಕಾಮಿಡಿ ಮಾತ್ರ ಅದ್ಭುತವಾಗಿದೆ ಎನ್ನುವ ಪೋಸ್ಟ್ಗಳು ಹೆಚ್ಚಾಗಿ ಎಕ್ಸ್ನಲ್ಲಿ ಕಾಣಿಸಿಕೊಂಡಿದೆ. ಕೆಲವರು, ಕಥಾವಸ್ತು ವಿನೂತನವಾಗಿ ಕಂಡರು, ಸಿನಿಮಾದಲ್ಲಿ ಬರುವ ತನಿಖಾ ಭಾಗಗಳು ಇಂಟ್ರೆಸ್ಟಿಂಗ್ ಆಗಿಲ್ಲ ಎಂದು ಹೇಳಿದ್ದಾರೆ.
ಸ್ಟಾರ್‌ಗಿರಿಗಿಂತ ಕಂಟೆಂಟ್ ಮುಖ್ಯ. ಸೀನ್ ಚಿತ್ರದ ಪೂರ ನಿರೂಪಣೆ, ಬರವಣಿಗೆ ಬುದ್ಧಿವಂತಿಕೆಯಿಂದ ಮೂಡಿಬಂದಿದೆ. ಸೂರ್ಯ ಮತ್ತು ನಟಿ ನಜ್ರಿಯಾಗೆ ಇದೊಂದು ಉತ್ತಮ ಕಂಬ್ಯಾಕ್ ಸಿನಿಮಾ ಎಂದಿದ್ದಾರೆ.
ವೆಂಕಿ ರಿವ್ಯೂವ್ ಎನ್ನುವ ಎಕ್ಸ್ ಬಳಕೆದಾರರೊಬ್ಬರು ಸಿನಿಮಾ ಬಗ್ಗೆ ಸುದೀರ್ಘ ವಿಮರ್ಶೆ ಹಂಚಿಕೊಂಡು 5ಕ್ಕೆ 2.5ರೇಟಿಂಗ್ ಕೊಟ್ಟಿದ್ದಾರೆ. 'ಸಿನಿಮಾಗೆ ಬಗ್ಗೆ ಅವರು ಹೇಳಿದ್ದು ಹೀಗೆ, ವಿಶಿಷ್ಟವಾದ ಶೈಲಿ ಮತ್ತು ಸಾಕಷ್ಟು ವಿಚಿತ್ರತೆಯೊಂದಿಗೆ ಮೂಡಿಬಂದಿರುವ ಒಂದು ಡಾರ್ಕ್ ಕ್ರೈಮ್ ಕಾಮಿಡಿ ಸಿನಿಮಾ. ಕೆಲವೊಂದು ಕಡೆ ಕಾಮಿಡಿ ಎನಿಸಿದರೆ, ಇನ್ನೂ ಕೆಲವು ಕಡೆ ಅತಿರೇಕ ಎನಿಸುತ್ತದೆ. ಸಿನಿಮಾದ ಕತೆ ವಿನೂತನವಾಗಿರುವಂತೆ ಭಾಸವಾಗುತ್ತದೆ. ಇನ್ನೂ ತನಿಖೆ ನಡೆಸುವ ಕೆಲವು ಭಾಗ ನೀರಸವಾಗಿದೆ. ಸೂರ್ಯ, ನಜ್ರಿಯಾ ಮತ್ತು ನಸ್ಲೆನ್ ಉತ್ತಮ ನಟನೆ ನೀಡಿದ್ದಾರೆ. ಆದರೆ, ಸಿನಿಮಾ ಆ ಮಟ್ಟವನ್ನು ಸಂಪೂರ್ಣವಾಗಿ ತಲುಪುವುದಿಲ್ಲ. ಒಮ್ಮೆ ನೋಡಬಹುದಾದ ಸಿನಿಮಾ' ಎಂದು ಬರೆದುಕೊಂಡಿದ್ದಾರೆ.
ಸಿನಿಮಾದ ಪ್ರತಿಯೊಂದು ದೃಶ್ಯ ಅದ್ಭುತವಾಗಿದೆ. ಮೊದಲಾರ್ಧ ಮಜಭೂತವಾಗಿದ್ದರೆ, ದ್ವಿತೀಯಾರ್ಧ ಅದ್ಭುತವಾಗಿದೆ. ಮಾಸ್ ದೃಶ್ಯಗಳಿಂದ ಕೂಡಿದೆ. ಸೂರ್ಯ ಮತ್ತು ನಸ್ಲೆನ್ ನಡುವಿನ ಕ್ಲೈಮ್ಯಾಕ್ಸ್ ಮೈಜುಮ್ಮೆನಿಸುವಂತೆ ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.
ಈ ವರ್ಷದಲ್ಲಿ ನಟ ಸೂರ್ಯ ಅವರು ನಟಿಸಿರುವ ಬೆಸ್ಟ್ ಸಿನಿಮಾ ಇದು ಎಂದಿದ್ದರೆ, ಇನ್ನೂ ಕೆಲಸವರು ನಜ್ರಿಯಾ ಮತ್ತು ಸೂರ್ಯ ಅವರ ಕಾಂಬಿನೇಷನ್ ತುಂಬಾನೆ ಚೆನ್ನಾಗಿ ಮೂಡಿಬಂದಿದೆ ಎಂದಿದ್ದಾರೆ.
ಕರುಪ್ಪು ಮತ್ತು ವಿಶ್ವನಾಥ್ ಆಂಡ್ ಸನ್ಸ್ ಸಿನಿಮಾ ನಂತರ ಸೂರ್ಯಾ ಅವರಿಗೆ ಸೀನ್ ಸಿನಿಮಾ ಹ್ಯಾಟ್ರಿಕ್ ಹಿಟ್ ತಂದುಕೊಡುವ ಸಿನಿಮಾ ಎನ್ನಲಾಗುತ್ತಿದೆ. ರಾಜ-ರಾಣಿ ಸಿನಿಮಾ ರಿಲೀಸ್ ಆಗಿ 12 ವರ್ಷ ಕಳೆದ ನಂತರ ನಜ್ರಿಯಾ ಕಾಲಿವುಡ್ಗೆ ಕಂಬ್ಯಾಕ್ ಆಗಿದ್ದು, ಇದು ಅವರಿಗೆ ಉತ್ತಮ ಸಿನಿಮಾವಾಗಿದೆ ಎನ್ನಲಾಗುತ್ತಿದೆ. ಪ್ರೇಮುಲು ಖ್ಯಾತಿಯ ನಟ ನಸ್ಲೆನ್ ಕಾಲಿವುಡ್ನ ಮೊದಲ ಸಿನಿಮಾ ಇದಾಗಿರಲಿದೆ. . ಮೂವರಿಗೂ ಇದೊಂದು ಅಗ್ನಿ ಪರೀಕ್ಷೆಯಾಗಿದ್ದು, ಬಾಕ್ಸ್ ಆಫೀಸಿನಲ್ಲಿ ಯಾವ ಮಟ್ಟಕ್ಕೆ ಸದ್ದು ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).