

ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ನಟನೆಯ ರಣಬಾಲಿ ರಿಲೀಸ್.
ತಾಳ್ಮೆ ಬೇಡುವ ಸಿನಿಮಾ, ರಶ್ಮಿಕಾ ಆಕ್ಟಿಂಗ್ ಕ್ರಿಂಜ್ ಎನಿಸುತ್ತೆ ಎಂದ ನೆಟ್ಟಿಗರು.
ಸಿನಿಮಾದ ಸೆಟ್, ವಿಜಯ್-ರಶ್ಮಿಕಾ ಆಕ್ಟಿಂಗ್, ಭಾವನಾತ್ಮಕ ಕ್ಷಣ ಸೂಪರ್ ಎಂದ ಫ್ಯಾನ್ಸ್.
ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ಸಿನಿಮಾ ರಣಬಾಲಿ ಸಿನಿಮಾ ರಿಲೀಸ್ ಆಗಿದೆ. ಏಂದಯ್ಯ ಸ್ವಾಮಿ ಹಾಡು..ರಶ್ಮಿಕಾರ ನಟನೆ, ವಿಜಯ್ ಅವರ ರಗಡ್ ಲುಕ್, ಟ್ರೇಲರ್ಗೆ ಫಿದಾ ಆಗಿದ್ದ ಸಿನಿ ಪ್ರೇಮಿಗಳು ಈಗ ಸಂಪೂರ್ಣ ಸಿನಿಮಾ ನೋಡಿ ಸುಸ್ತಾಗಿದ್ದಾರೆ. ಒಳ್ಳೆ ಕತೆ ಆಯ್ಕೆ ಮಾಡ್ಕೊಳ್ಳಬೇಕು. ತುಂಬಾನೆ ತಾಳ್ಮೆ ಬೇಡುತ್ತೆ ಎಂದು ಹಲವರು ಹೇಳುತ್ತಿದ್ದರೆ, ಕೆಲವರು ತುಂಬಾ ಒಳ್ಳೆ ಸಿನಿಮಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ರಾಹುಲ್ ಸಂಕೃತ್ಯಾಯನ್ ಆಕ್ಷನ್ ಕಟ್ ಹೇಳಿರುವ 'ರಣಬಾಲಿ' ಸಿನಿಮಾವು ಅ,16ರಂದು ರಿಲೀಸ್ ಆಗಿದೆ, ಮೈತ್ರಿ ಮೂವಿ ಮೇಕರ್ಸ್ (ನವೀನ್ ಯೆರ್ನೆನಿ ಮತ್ತು ವೈ. ರವಿಶಂಕರ್) ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸಲಾಗಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ಈ ಚಿತ್ರದಲ್ಲಿ ಖಳನಾಯಕನಾಗಿ ಮಿಂಚಿದ್ದಾರೆ.
ರಣಬಾಲಿ ಸಿನಿಮಾವು ಬಿಡುಗಡೆಗೂ ಮುನ್ನವೇ 4.33 ಕೋಟಿಯಿಂದ 6.49 ಕೋಟಿ ಗಳಿಕೆ ಮಾಡಿದೆ. ಭಾರತದಲ್ಲಿ ಮುಂಗಡ ಟಿಕೆಟ್ಗಳು ಭರ್ಜರಿ ಸೇಲ್ ಆಗಿದೆ. ಮೊದಲ ದಿನದ ಪ್ರದರ್ಶನಗಳಿಗಾಗಿ ಭಾರತದಾದ್ಯಂತ ಸುಮಾರು 2.68 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾವಾಗಿದ್ದ ವಿದೇಶದಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಮಡಿದೆ
ವೆಂಕಿ ರಿವ್ಯೂ ಎಂಬುವವರ ಪ್ರಕಾರ 'ನಿಜವಾದ ಘಟನೆಗಳನ್ನು ಅಥವಾ ಕಥೆಗಳನ್ನು ತೆರೆಯ ಮೇಲೆ ತರಲು ನಿರ್ದೇಶಕರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದರೆ, ನಿರೂಪಣೆ ನಿಧಾನವಾಗಿದೆ. ಸಪ್ಪೆ ಎನಿಸುತ್ತದೆ. ಚಿತ್ರ ಆರಂಭವಾಗಿ ಒಂದು ಗಂಟೆಗೆ ಸಹನೆ ಬೇಡುತ್ತದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೋಡಿಯ ದೃಶ್ಯಗಳು ಸ್ವಲ್ಪ ರಿಲೀಫ್ ನೀಡುತ್ತವೆ ಮತ್ತು ಇದೇ ಚಿತ್ರದ ಮುಖ್ಯ ಹೈಲೈಟ್ ಆಗಿವೆ. ಆದರೆ, ಇಂತಹ ಗಂಭೀರ ಕಥೆಗೆ ಬೇಕಾದ ಭಾವನಾತ್ಮಕ ನಂಟಿನ ಕೊರತೆ ಎದ್ದು ಕಾಣುತ್ತದೆ. ಬಹಳಷ್ಟು ಕಡೆಗಳಲ್ಲಿ ಜೀವವಿಲ್ಲದೆ ಮತ್ತು ಸುಸ್ತಾಗಿಸುವಂತೆ ಅನಿಸುತ್ತದೆ.
'ಸೆಟ್ ವಿನ್ಯಾಸ ಗಮನ ಸೆಳೆಯುತ್ತವೆ. ವಿಜಯ್ ದೇವರಕೊಂಡ ಅವರ ಶ್ರಮ ಕಾಣಿಸುತ್ತದೆ ಮತ್ತು ಅವರು ಪ್ರಾಮಾಣಿಕ ಅಭಿನಯವನ್ನು ನೀಡಿದ್ದಾರೆ, ಆದರೂ ಅವರ ಪಾತ್ರದ ರೂಪುಗೊಳ್ಳುವಿಕೆ ಕೆಲವೊಮ್ಮೆ ವಿಚಿತ್ರವೆನಿಸುತ್ತದೆ. ಹಿನ್ನೆಲೆ ಸಂಗೀತದೊಡ್ಡ ನಿರಾಶೆಯನ್ನುಂಟು ಮಾಡುತ್ತದೆ, ಮತ್ತು ಚಿತ್ರಕ್ಕೆ ಕತ್ತರಿ ಹಾಕುವುದು ಅತ್ಯಂತ ಅವಶ್ಯಕವಾಗಿದೆ. ಬೋರ್ ಹೊಡೆಸುವ ಸಿನಿಮಾ' ಎಂದು ವೆಂಕಿ ರಿವ್ಯೂ ಎಂಬ ಎಕ್ಸ್ ಬಳಕೆದಾರ ಬರೆದುಕೊಂಡಿದ್ದಾರೆ.ರೇಟಿಂಗ್: 2/5 ಕೊಟ್ಟಿದ್ದಾರೆ.
its cinema ಎಂಬ ಎಕ್ಸ್ ಬಳಕೆದಾರ ಬರೆದುಕೊಂಡಿರುವುದು ಹೀಗೆ..'ರಣಬಾಲಿ ಫಸ್ಟ್ ಹಾಫ್ ಸಖತ್ ಗಮನ ಸೆಳೆಯುತ್ತದೆ. ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾರ ಕಾಂಬಿನೇಷನ್ ಚಂದ ಎನಿಸುತ್ತದೆ. ಡೈಲಾಕ್, ಸೀಕ್ವೆನ್ಸ್ ಅದ್ಭುತ. ಬ್ರಿಟಿಷರ ಎಂಟ್ರಿ ಕೂಡ ಚೆನ್ನಾಗಿ ಮೂಡಿಬಂದಿದೆ' ಎಂದು ಬರೆದುಕೊಂಡಿದೆ.
Thyview ಎಂಬ ಖಾತೆಯಿಂದ ಸಿಕ್ಕ ರಿವ್ಯೂ ಹೀಗಿದೆ. 'ರಣಬಾಲಿ ಸಿನಿಮಾ ನಿರಾಸೆಯನ್ನು ಮೂಡಿಸುತ್ತದೆ, ಉತ್ತಮ ಕಥಾವಸ್ತು ಮತ್ತು ಭರ್ಜರಿ ನಿರ್ಮಾಣವಿದ್ದರೂ ಕಥೆಗೆ ಹಿನ್ನಡೆಯಾಗಿದೆ. ಮೊದಲಾರ್ಧಪರವಾಗಿಲ್ಲ ಎನಿಸುವಂತಿದೆ, ಅದರಲ್ಲೂ ವಿಜಯ್-ರಶ್ಮಿಕಾರ ನಡುವಿನ ಭಾವನಾತ್ಮಕ ದೃಶ್ಯಗಳು ಸುಂದರವಾಗಿದೆ. ಆದರೆ ಸಾಹಸ ದೃಶ್ಯಗಳು ನಿರೀಕ್ಷೆ ಮುಟ್ಟಿಲ್ಲ.ದ್ವಿತೀಯಾರ್ಧ: ಗೊಂದಲಮಯ ಕಥೆಯಿಂದಾಗಿ ಇದು ದೊಡ್ಡ ನಿರಾಶೆಯನ್ನುಂಟು ಮಾಡುತ್ತದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಉತ್ತಮ ಅಭಿನಯ ನೀಡಿದ್ದಾರೆ. ಚಿತ್ರಕ್ಕೆ ಸುಮಾರು 30 ನಿಮಿಷಗಳ ಕತ್ತರಿ ಹಾಕಿದ್ದರೆ ಸಿನಿಮಾ ಮತ್ತಷ್ಟು ಚೆನ್ನಾಗಿರುತ್ತಿತ್ತು.ಒಟ್ಟಾರೆಯಾಗಿ, ಒಂದು ಪರವಾಗಿಲ್ಲ ಎನಿಸುವ ಮೊದಲಾರ್ಧ ಮತ್ತು ಸುಸ್ತು ಮಾಡಿಸುವ ದ್ವಿತೀಯಾರ್ಧ' ಎಂದು ಬರೆದುಕೊಂಡಿದ್ದಾರೆ.
ಹಾನೆಸ್ಟ್ ರಿವ್ಯೂ ಎಂಬುವವರು ಸಿನಿಮಾ ಬಗ್ಗೆ ಮಾತನಾಡಿದ್ದು, 'ನಿದ್ದೆ ಮಾಡಲು ಕಷ್ಟಪಡುತ್ತಿದ್ದೀರಾ? ಒಳ್ಳೆಯ ನಿದ್ರೆಗಾಗಿ ರಣಬಾಲಿ ವೀಕ್ಷಿಸಿ. ಚಿತ್ರಕಥೆ ಮತ್ತು ನಿರ್ದೇಶನ ಬೋರಿಂಗ್ ಆಗಿದೆ. ವಿಜಯ್ ಅವರ ನಟನೆ ಕೆಲವೊಂದು ಕಡೆ ಚೆನ್ನಾಗಿದ್ದರೆ, ಇನ್ನು ಕೆಲವು ಕಡೆ ಕ್ರಿಂಜ್ ಪ್ರೋಮ್ಯಾಕ್ಸ್. ರಶ್ಮಿಕಾ ಮಂದಣ್ಣ ನಟನೆ ಸಹ ಕ್ರಿಂಜ್ ಪ್ರೋಮ್ಯಾಕ್ಸ್ ಪದಗಳಿಲ್ಲ! ಎಂದಿದ್ದಾರೆ. ನಿರ್ಮಾಣ ಗುಣಮಟ್ಟ, ಸೆಟ್ಗಳು ಮತ್ತು ಪಾತ್ರವರ್ಗ ಪ್ರಭಾವಶಾಲಿಯಾಗಿದೆ. ಛಾಯಾಗ್ರಹಣ ತುಂಬಾ ಚೆನ್ನಾಗಿದೆ. ಭಾವನಾತ್ಮಕ ದೃಶ್ಯಗಳು ರಕ್ತವನ್ನು ತರುತ್ತವೆ, ಕಣ್ಣೀರನ್ನು ಅಲ್ಲ' ಎಂದಿದ್ದಾರೆ, (ಏಜೆನ್ಸೀಸ್).