ಮೂರನೆಯ ಚಿತ್ರದ ತಯಾರಿಯಲ್ಲಿ ನಿರ್ದೇಶಕ ಸತ್ಯಪ್ರಕಾಶ್

Sathya
Published on

ಬೆಂಗಳೂರು: ‘ರಾಮಾ ರಾಮಾ ರೇ’ ಮತ್ತು ‘ಒಂದಲ್ಲ ಎರಡಲ್ಲ’ ಚಿತ್ರಗಳನ್ನು ನಿರ್ದೇಶಿಸಿದ್ದ ಸತ್ಯಪ್ರಕಾಶ್, ಮುಂದಿನ ಚಿತ್ರ ಯಾವುದು ಎಂಬ ಕುತೂಹಲ ಎಲ್ಲರಲ್ಲೂ ಸಹಜವಾಗಿಯೇ ಇತ್ತು. ಪುನೀತ್ ನಿರ್ವಣದ ಹೊಸ ಚಿತ್ರವೊಂದನ್ನು ಸತ್ಯ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ಈಗ ಆ ಚಿತ್ರವನ್ನು ಸ್ವಲ್ಪ ಪಕ್ಕಕ್ಕಿಟ್ಟು, ಇನ್ನೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ಸತ್ಯ. ಈ ಬಾರಿ ಅವರು, ಸತ್ಯ ಪಿಕ್ಚರ್ಸ್ ಎಂಬ ಹೊಸ ನಿರ್ಮಾಣ ಸಂಸ್ಥೆಯೊಂದನ್ನು ಶುರು ಮಾಡಿದ್ದಾರೆ.

‘ವೀಕೆಂಡ್’ ಚಿತ್ರವನ್ನು ನಿರ್ವಿುಸಿದ್ದ ಮಂಜುನಾಥ್ ಅವರ ಮಯೂರ ಪಿಕ್ಚರ್ಸ್ ಜತೆಗೆ ಸೇರಿಕೊಂಡು ಒಂದಿಷ್ಟು ಕಂಟೆಂಟ್ ತಯಾರಿಸುವ ಪ್ರಯತ್ನ ನಡೆಯಲಿದೆ. ಸತ್ಯ ಮತ್ತು ಮಯೂರ ಪಿಕ್ಚರ್ಸ್, ಮುಂದಿನ ದಿನಗಳಲ್ಲಿ ನಿರಂತರವಾಗಿ ಸಿನಿಮಾ ಮತ್ತು ಓಟಿಟಿಗೆ ಬೇಕಾದ ಕಥೆಗಳನ್ನು ತೆರೆಗೆ ತರುವ ಪ್ರಯತ್ನ ಮಾಡಲಿದೆಯಂತೆ. ಮೊದಲ ಹಂತವಾಗಿ, ಈ ಸಂಸ್ಥೆಯ ಮೊದಲ ಚಿತ್ರವನ್ನು ಸತ್ಯಪ್ರಕಾಶ್ ಅವರೇ ನಿರ್ದೇಶಿಸಲಿದ್ದಾರೆ. ‘ರಾಮಾ ರಾಮಾ ರೇ’ ಚಿತ್ರವನ್ನು ರೂಪಿಸಿದ್ದ ತಂಡವೇ ಈ ಚಿತ್ರ ರೂಪಿಸಲಿದೆ. ಚಿತ್ರೀಕರಣಕ್ಕೆ ಸಿದ್ಧವಾಗುತ್ತಿರುವ ಈ ಚಿತ್ರದ ಇನ್ನಷ್ಟು ವಿವರಗಳು ಸದ್ಯದಲ್ಲೇ ಹೊರಬೀಳಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net