ಪ್ರೀತಿ, ಸಾಧನೆಯ ನಡುವಿನ ಪಯಣ 'ಸರು' ...

Saru - Final
Published on

ಬೆಂಗಳೂರು: ಸಾಧನೆಯ ಕನಸನ್ನು ಹೊತ್ತ ನಾಯಕ, ಮಗನ ಕನಸಿಗಾಗಿ ಜತೆ ನಿಲ್ಲುವ ತಂದೆ, ಪ್ರೀತಿಗಾಗಿ ಚಡಪಡಿಸೋ ನಾಯಕಿ, ನಾಯಕಿಯ ಸಂತಸದಲ್ಲಿ ಸ್ವರ್ಗ ಕಾಣೋ ಕುಟುಂಬ … ಈ ಪ್ರೀತಿಯ, ಸಾಧನೆಯ ಪಯಣವೇ 'ಸರು'.

ಕೋವಿಡ್​ ನಂತರ ಕನ್ನಡ ಚಿತ್ರರಂಗದಲ್ಲಿ ಹಲವು ಹೊಸ ಪ್ರತಿಭೆಗಳು, ಹೊಸಹೊಸ ಕನಸುಗಳನ್ನು ಕಟ್ಟಿಕೊಂಡು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅಂಥವರ ಸಾಲಿಗೆ ಈ 'ಸರು' ಚಿತ್ರತಂಡ ಸಹ ಸೇರಿದೆ. ಇಲ್ಲಿ ಪೋಷಕ ಕಲಾವಿದರನ್ನು ಹೊರತುಪಡಿಸಿದರೆ, ಮಿಕ್ಕಂತೆ ಕಲಾವಿದರು ಮತ್ತು ತಂತ್ರಜ್ನರೆಲ್ಲ ಹಳಬರೇ. ಸಂಜು ಪಿಕ್ಚರ್ಸ್​ನಡಿ ಸಮೃದ್ಧಿ ರಾಘವೇಂದ್ರ ಹಾಗೂ ಸೋಮಶೇಖರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಸೋಮಶೇಖರ್​ ನಿರ್ದೇಶಿಸುತ್ತಿದ್ದಾರೆ. ಇನ್ನು, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ಸಹನಿರ್ದೇಶನವನ್ನು ರಾಘವೇಂದ್ರ ಮಾಡುತ್ತಿದ್ದಾರೆ.

ಪ್ರಫುಲ್ ಸುರೇಂದ್ರ ನಾಯಕನಾಗಿ, ಸೋನಿ ನಾಯಕ-ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ರಮೇಶ್ ಭಟ್, ಸಂಗೀತಾ, ಶಂಕರ್​ ಅಶ್ವತ್ಥ್​, ಮಾಸ್ಟರ್ ಹರ್ಷ, ಮುಂತಾದವರು ನಟಿಸುತ್ತಿದ್ದಾರೆ.

ಸದ್ಯದಲ್ಲೇ ಶುರುವಾಗಲಿರುವ ಈ ಚಿತ್ರಕ್ಕೆ ಅತಿಶಯ್​ ಜೈನ್​ ಸಂಗೀತ ಸಂಯೋಜಿಸಿದ್ದು, ಕೊಟ್ರೇಶ್​ ಐನಳ್ಳಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಚಾಮರಾಜನಗರ, ಮಂಗಳೂರು, ಮಡಿಕೇರಿ, ಸಕ್ಲೇಶಪುರದಲ್ಲಿ ಚಿತ್ರೀಕರಣ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net