ಜೂ.ಚಿರು ಆಗಮನ, ಮೇಘನಾ ಫುಲ್​ ಖುಷ್​

meghana raj
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟ ದಿ. ಚಿರಂಜೀವಿ ಸರ್ಜಾ ಕುಟುಂಬಕ್ಕೆ ಜೂ.ಚಿರು ಎಂಟ್ರಿಯಾಗಿದ್ದಾರೆ. ಮೇಘನಾ ಅವರಿಗೆ ಬುಧವಾರ ಬೆಳಗ್ಗೆ 11 ಸುಮಾರಿಗೆ ಗಂಡು ಮಗು ಜನಿಸಿದೆ.

ಅಪ್ಪ-ಅಮ್ಮನ ನಿಶ್ಚಿತಾರ್ಥದ ದಿನವೇ ಜೂನಿಯರ್ ಚಿರು ಆಗಮನ ಸರ್ಜಾ ಕುಟುಂಬದಲ್ಲಿ ಖುಷಿಯ ಹೂರಣ ಉಣಬಡಿಸಿದೆ. ಜೂ.ಚಿರು ಜನನ ಆಗುತ್ತಿದ್ದಂತೆ ಆಸ್ಪತ್ರೆಯಲ್ಲಿ ನೆರೆದಿದ್ದ ಕುಟುಂಬಸ್ಥರ‌ ಮೊಗದಲ್ಲಿ ಆನಂದ ಬಾಷ್ಪ ಬಂತು. ಬೆಳ್ಳಿ ತೊಟ್ಟಿಲಿನಲ್ಲಿ ಕಂದನನ್ನು ಮುದ್ದಾಡಲು ಚಿಕ್ಕಪ್ಪ ಧ್ರುವ ಸರ್ಜಾ ಕಾತುರದಿಂದ ಕಾಯುತ್ತಿದ್ದಾರೆ.

ಜ್ಯೂ.‌ಚಿರು ಆಗಮನಕ್ಕೆ ಕಾಯುತ್ತಿದ್ದ ಸರ್ಜಾ ಫ್ಯಾಮಿಲಿ, ಇತ್ತೀಚಿಗೆ ಚಿರು ಮಗುವಿನ ವೆಲ್​ಕಮ್​ಗೆ ಸ್ಪೆಷಲ್ ವಿಡಿಯೋ ಮಾಡಿತ್ತು. ಅ.17ರಂದು ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ ಇತ್ತು. ಅಂದು ಸಹೋದರ ಧ್ರುವ ಸರ್ಜಾ ತನ್ನ ಇನ್​ಸ್ಟಾಗ್ರಾಂನಲ್ಲಿ ಆ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದರು. ಚಿರು ಹುಟ್ಟುಹಬ್ಬದ ದಿನವೇ ಜೂ. ಚಿರು ಜನನ ಆಗಲಿದೆಯಾ? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು. ಇದೀಗ ಚಿರು ಮತ್ತು ಮೇಘನಾರ ಎಂಗೇಜ್​ಮೆಂಟ್​ ನಡೆದಿದ್ದ ದಿನವೇ ಜೂ.ಚಿರು ಜನಿಸಿದ್ದಾನೆ. 2017ರ ಅಕ್ಟೋಬರ್ 22ರಂದು ಚಿರು-ಮೇಘನಾ ನಿಶ್ಚಿತಾರ್ಥ ನಡೆದಿತ್ತು.

ಚಿರು ಮತ್ತು ಮೇಘನಾ ಇಬ್ಬರೂ 2018ರಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಎರಡೇ ವರ್ಷಕ್ಕೆ ಅಂದರೆ 2020ರ ಜೂನ್​ 7ರಂದು ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದರು. ಅಂದಿನಿಂದ ದುಃಖದ ಮಡುವಿನಲ್ಲೇ ಇರುವ ಎರಡೂ ಕುಟುಂಬಕ್ಕೀಗ ಜೂ.ಚಿರು ಖುಷಿಯ ಬುತ್ತಿ ತಂದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net