ಜನಪ್ರಿಯ ಬಲೂನ್​ ಆಕ್ಟ್​ ಕಲಾವಿದ ಶರವಣ ಧನಪಾಲ್​​ ನಿಧನ

WEB
Published on

ಬೆಂಗಳೂರು: ಹಲವು ಚಾನಲ್​ಗಳಲ್ಲಿ ತಮ್ಮ ಬಲೂನ್​ ಆಕ್ಟ್​ ಮೂಲಕ ಜನಪ್ರಿಯವಾಗಿದ್ದ ಶರವಣ ಧನಪಾಲ್​ (35) ಬುಧವಾರ ತಡರಾತ್ರಿ ನಿಧನರಾಗಿದ್ದಾರೆ. ಅವರು ಕಿಡ್ನಿ ವೈಫಲ್ಯದಿಂದ ನಿಧನರಾಗಿದ್ದು, ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.

ಸೋನಿ, ಈಟಿವಿ ಸೇರಿದಂತೆ ಹಲವು ಚಾನಲ್​ಗಳ ಟ್ಯಾಲೆಂಟ್​ ಹಂಟ್​ ಕಾರ್ಯಕ್ರಮಗಳಲ್ಲಿ ಶರವಣ ಧನಪಾಲ್​ ಕಾರ್ಯಕ್ರಮಗಳನ್ನು ನೀಡಿದ್ದರು. ಅಷ್ಟೇ ಅಲ್ಲದೆ, ಸಿಂಗಾಪೂರ್​ ಸೇರಿದಂತೆ ಹಲವು ದೇಶಗಳಲ್ಲಿ ಅವರು ಕಾರ್ಯಕ್ರಮ ನೀಡಿ ಫೇಮಸ್​ ಆಗಿದ್ದರು. ಡಾ. ರಾಜ್​ಕುಮಾರ್​, ವಿಷ್ಣುವರ್ಧನ್, ಅಂಬರೀಶ್, ಪುನೀತ್​ ರಾಜಕುಮಾರ್​, ರಜನಿಕಾಂತ್, ರಮೇಶ್​ ಅರವಿಂದ್​, ಯಶ್​ ಮುಂತಾದವರು ಶರವಣ ಧನಪಾಲ್​ ಅವರ ಬಲೂನ್​ ಆಕ್ಟ್​ ನೋಡಿ ಖುಷಿ ವ್ಯಕ್ತಪಡಿಸಿದ್ದರು.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಕಿಡ್ನಿ ಕಸಿ ಸಹ ಮಾಡಿಸಿಕೊಂಡಿದ್ದರು. ಆ ನಂತರ ಇನ್​ಫೆಕ್ಷನ್​ ಆಗಿದ್ದರಿಂದ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು. ಬುಧವಾರ (ಸೆ.21) ಮಧ್ಯರಾತ್ರಿ ಶರವಣ ಧನಪಾಲ್​ ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ಗುರುವಾರ ನೆರವೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net