ಕೇದಾರನಾಥದಲ್ಲಿ ಸಾರಾ ಅಲಿ ಖಾನ್​-ಜಾಹ್ನವಿ ಕಪೂರ್

Sara Jahnavi
Published on

ಮೊದಲು ಒಂದೇ ಜಿಮ್ಲ್ಲಿ ವರ್ಕೌಟ್ ಮಾಡುತ್ತಿದ್ದ ಸಾರಾ ಅಲಿ ಖಾನ್ ಮತ್ತು ಜಾಹ್ನವಿ ಕಪೂರ್ ಇತ್ತೀಚೆಗೆ ಬಹಳ ಹತ್ತಿರವಾಗಿದ್ದಾರೆ. ಬಾಲಿವುಡ್​ನಲ್ಲಿ ಒಳ್ಳೆಯ ಸ್ನೇಹಿತೆಯರಾಗಿ ಗುರುತಿಸಿಕೊಂಡಿರುವ ಅವರಿಬ್ಬರು, ಇತ್ತೀಚೆಗೆ ರಣವೀರ್ ಸಿಂಗ್ ನಡೆಸಿಕೊಡುವ ‘ದಿ ಬಿಗ್ ಪಿಕ್ಚರ್’ ಕಾರ್ಯಕ್ರಮದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಈಗ ಅವರಿಬ್ಬರೂ ಕೇದರಾಥಕ್ಕೆ ಭೇಟಿ ನೀಡಿ, ದೇವರ ದರ್ಶನ ಮಾಡಿದ್ದಾರೆ. ಸಾರಾ ಅಲಿ ಖಾನ್​ಗೆ ಕೇದರನಾಥ ಹೊಸದೇನಲ್ಲ. ಆಕೆಯ ಮೊದಲ ಚಿತ್ರ ‘ಕೇದಾರನಾಥ್’ ಚಿತ್ರೀಕರಣವಾಗಿ ಅದೇ ಜಾಗದಲ್ಲಿ. ಆಗಿಂದಲೂ ಅಲ್ಲಿಗೆ ಹಲವು ಬಾರಿ ಸಾರಾ ಹೋಗಿ ಬಂದಿದ್ದಾರೆ.

ಇಷ್ಟು ದಿನ ಚಿತ್ರೀಕರಣಕ್ಕೆ ಹೋಗುತ್ತಿದ್ದ ಅವರು, ಇದೇ ಮೊದಲ ಬಾರಿಗೆ ಗೆಳತಿಯೊಂದಿಗೆ ಭೇಟಿಕೊಟ್ಟು ದೇವರ ದರ್ಶನ ಮಾಡುವುದರ ಜತೆಗೆ, ಅಲ್ಲಿ ಪೂಜೆ ಸಲ್ಲಿಸಿ ಬಂದಿದ್ದಾರೆ. ಇಬ್ಬರು ಗೆಳತಿಯರು ಅಲ್ಲಿ ತೆಗೆಸಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, ‘ಎಂಥಾ ಸಂಸ್ಕಾರ’ ಎಂದು ನೆಟ್ಟಿಗರು ಬಹಳಷ್ಟು ಕೊಂಡಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಜತೆಗೆ ‘ಅತರಂಗಿ ರೇ’ ಎಂಬ ಚಿತ್ರದಲ್ಲಿ ನಟಿಸಿರುವ ಸಾರಾ, ಆ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇನ್ನು, ‘ಗುಡ್ ಲಕ್ ಜೆರ್ರಿ’ ಮತ್ತು ಮಲಯಾಳಂ ‘ಹೆಲೆನ್’ನ ಹಿಂದಿ ರೀಮೇಕ್​ನಲ್ಲಿ ಜಾಹ್ನವಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net