ಹೌದು, ಸೋಮವಾರ ನಟಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ಮೊದಲ ಫೋಟೋದಲ್ಲಿ ನಟಿ ನೀಲಿ ಬಿಕಿನಿಯಲ್ಲಿ ಸೋಗಸಾಗಿ ಪೋಸ್ ಕೊಟ್ಟಿರುವುದು ಕಂಡುಬಂದಿದೆ. ಈ ಮೊದಲ ಫೋಟೋಗೆ ನಟಿ ಸಾರಾ, 'ಇನ್ಸ್ಟಾಗ್ರಾಂ ನಲ್ಲಿ ಸೋಮವಾರಗಳು ಹೀಗಿರುತ್ತೆ' ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಮತ್ತೊಂದೆಡೆ, ಎರಡನೇ ಫೋಟೋದಲ್ಲಿ ನಟಿ ಕಪ್ಪು ಬಿಕಿನಿಯಲ್ಲಿ ಆಕಳಿಸುತ್ತಿರುವುದು ಕಂಡುಬಂದಿದೆ. ಇನ್ನು, ಈ ಫೋಟೋಗೆ, 'ಇದು ಇನ್ಸ್ಟಾಗ್ರಾಂ ಹಿಂದಿನ ಸೋಮವಾರದ ರಿಯಾಲಿಟಿ' ಎಂದು ತಿಳಿಸಿದ್ದಾರೆ.