'ಸೂಪರ್​ಮ್ಯಾನ್' ​ ಜೊತೆ ಬಾಲಿವುಡ್​ ನಟಿ ಸಾರಾ ಪೋಸ್​; ರಾಯಲ್​ ಅಫೇರ್​ ವಿತ್​​​​​​​ ಹೆನ್ರಿ ಕ್ಯಾವಿಲ್​ ಅಂತ ಹೇಳಿದ್ಯಾಕೆ?​..Sara Ali Khan

Sara Ali Khan Poses With Henry Cavill
Sara Ali Khan Poses With Henry Cavill
Published on

ಪ್ರಮುಖ ಮುಖ್ಯಾಂಶಗಳು

  • ಹಾಲಿವುಡ್​​ ನಟನೊಂದಿಗೆ ಗುಟ್ಟಾಗಿ ಮದುವೆ ಮಾಡಿಕೊಂಡರಾ ಸಾರಾ ಅಲಿಖಾನ್​
  • ಲಂಡನ್​ನಲ್ಲಿ ನಡೆದ ಪ್ರತಿಷ್ಠಿತ ರಾಯಲ್​ ಅಸ್ಕಾಟ್​​​ ಕುದುರೆ ರೇಸ್ ಕ್ರೀಡಾಕೂಟದಲ್ಲಿ ಭಾಗಿ
  • ರಾಯಲ್​ ಅಸ್ಕಾಟ್​ನಲ್ಲಿ ಹೆನ್ರಿ ಕ್ಯಾವಿಲ್​ ಜೊತೆಗೆ ಫೋಟೋ ಶೂಟ್​ ಮಾಡಿಸಿಕೊಂಡ ಸಾರಾ
Sara Ali Khan Poses With Henry Cavill: ಸೆಲಬ್ರೆಟಿಗಳು ಯಾವ ದೇಶದಲ್ಲಿದ್ದರೂ ಅವರ ಬಗ್ಗೆ ಮಾಹಿತಿ ಕಲೆ ಹಾಕುವುದು ಅವರ ಅಭಿಮಾನಿಗಳ ಅಭ್ಯಾಸ. ಯಾರೊಂದಿಗಿದ್ದಾರೆ. ಡೇಟಿಂಗ್​ ಸೇರಿದಂತೆ ನಾನಾ ವಿಚಾರಗಳ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಅದರಂತೆ ಸದ್ಯ ಬಾಲಿವುಡ್​ ನಟಿ ಸಾರಾ ಅಲಿಖಾನ್​ ಅವರು ಹಾಲಿವುಡ್​ ನಟ ಹೆನ್ರಿ ಕ್ಯಾವಿಲ್ ಜೊತೆಗೆ ಹಂಚಿಕೊಂಡಿರುವ ಫೋಟೋಗಳು ಸದ್ಯ ನಾನಾ ಊಹಾಪೋಹಕ್ಕೆ ಕಾರಣವಾಗಿದೆ.
ಲಂಡನ್​ನಲ್ಲಿ ನಡೆದ ಪ್ರತಿಷ್ಠಿತ ರಾಯಲ್​ ಅಸ್ಕಾಟ್​​​ ಕುದುರೆ ರೇಸ್ ಕ್ರೀಡಾಕೂಟದಲ್ಲಿ ಸಾರಾ ಅಲಿಖಾನ್​ ಮತ್ತು ಹೆನ್ರಿ ಕ್ಯಾವಿಲ್​ ಭಾಗವಹಿಸಿದ್ದಾರೆ. ಈ ವೇಳೆ ಆತ್ಮೀಯವಾಗಿ ತೆಗೆಸಿಕೊಂಡ ಫೋಟೋವನ್ನು ಹಂಚಿಕೊಂಡಿಡಿದ್ದಾರೆ. ಇಷ್ಟೇ ಅಲ್ಲದೆ, ರಾಯಲ್​ ಅಫೇರ್​ ವಿತ್​ ಎಂದು ಹೆನ್ರಿಯನ್ನು ಟ್ಯಾಗ್​ ಮಾಡಿರುವುದು ಗುಸುಗುಸುಗೆ ಕಾರಣವಾಗಿದೆ. ಇಬ್ಬರು ಗುಟ್ಟಾಗಿ ಮದುವೆಯಾದರ ಅಥವಾ ಡೇಟಿಂಗ್​ನಲ್ಲಿದ್ದಾರ ಎನ್ನುವ ಬಗ್ಗೆ ಸಾರಾ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಹೆನ್ರಿ ಕ್ಯಾವಿಲ್​ ಜೊತೆ ಫೋಟೋಶೂಟ್

ಸಾರಾ ಈ ಕ್ರೀಡಾ ಕಾರ್ಯಕ್ರಮಕ್ಕೆ ಬಿಳಿ ಬಣ್ಣದ ಫಾರ್ಮಲ್​​​ ಸ್ಕರ್ಟ್​, ಹ್ಯಾಟ್​, ಹೀಲ್ಸ್​ ಧರಿಸಿ ಸಿಂಪಲ್​ ಲುಕ್​ನಲ್ಲಿ ಮಿಂಚಿದ್ದಾರೆ. ಇನ್ನು ಹೆನ್ಸರಿ ಅವರು ಕ್ಲಾಸಿಕ್​ ಬ್ಲ್ಯಾಕ್​ ಅಡ್​ ವೈಟ್​ ಸೂಟ್​ ಧರಿಸಿ ಪೋಸ್ ಕೊಟ್ಟಿದ್ದಾರೆ. ಇಬ್ಬರು ಕ್ರೈಸ್ತ ಧರ್ಮದ ವಧು-ವರನಂತೆ ಕಂಡಿದ್ದರಿಂದ ಅಭಿಮಾನಿಗಳು, ಗುಟ್ಟಾಗಿ ಮದುವೆಯಾಗಿರಬಹುದು ಅಥವಾ ಡೇಟಿಂಗ್​ನಲ್ಲಿದ್ದಾರೆ ಎಂದು ತಪ್ಪಾಗಿ ಭಾವಿಸಿದ್ದಾರೆ.
ಆದರೆ, ಇದು ಗುಟ್ಟಾದ ಮದುವೆ ಅಲ್ಲ. ಬ್ರಿಟನ್​ನ ರಾಯಲ್​ ಅಸ್ಕಾರ್ಟ್​ಗೆ ಭಾಗವಹಿಸುವರ ಡ್ರೆಸ್​ ಕೋರ್ಟ್​​. ಅಲ್ಲಿಗೆ ಬರುವ ಪುರುಷರು ಹಾಗೂ ಮಹಿಳೆಯರು ಇಂತದ್ದೇ ಸಾಂಪ್ರದಾಯಿಕ ಡ್ರೆಸ್​ ಧರಿಸಬೇಕು ಎನ್ನಲಾಗಿದೆ. ಇನ್ನು ಈ ಕಾರ್ಯಕ್ರಮಕ್ಕೆ ರಾಣಿ ಕೆಮಿಲ್ಲಾ, ಚಾರ್ಲ್ಸ್​III ಹಾಗೂ ರಾಜಕುಮಾರ್​ ವಿಲಿಯಂ ಸೇರಿದಂತೆ ರಾಜ ಮನೆತನ ಭಾಗಿಯಾಗುತ್ತದೆ.

ನೆಟ್ಟಿಗರು ಏನಂದ್ರು?

ಸಾರಾ ಜೊತೆಗೆ ನಿಂತಿದ್ದ ಹೆನ್ರಿ ಕ್ಯಾವಿಲ್​ ಕಂಡು ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ. ಇದು ನಿಜವೋ ಅಥವಾ ಎಐನಿಂದ ಕ್ರಿಯೇಟ್​ ಮಾಡಿದ ಚಿತ್ರವೋ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಪಟೋಡಿ ಪ್ರಿನ್ಸೆಸ್​ ಹಾಗೂ ಸೂಪರ್​ ಮ್ಯಾನ್​ ಎಂದು ಕರೆದುಕೊಂಡಿದ್ದಾರೆ.
ಸಾರಾ ಅಲಿಖಾನ್​ ಅವರು ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ನಟ ಆಯುಷ್ಮಾನ್​ ಖುರಾನ ಜೊತೆಗೆ ನಟಿಸಿದ್ದ ಪತಿ ಪತ್ನಿ ಔರ್​ ದೋ ರಿಲೀಸ್​ ಆಗಿತ್ತು. ಜೊತೆಗೆ ಧರ್ಮಾ ಪ್ರೊಡಕ್ಷನ್ಸ್ ನಿರ್ಮಾಣದ 'ಉಡ್ತಾ ತೀರ್' ಸ್ಪೈ ಕತೆಯ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net