ಕಾಂತಾರದಲ್ಲಿ ರಿಷಬ್​ಗೆ ಜೋಡಿಯಾಗಿ ಸಪ್ತಮಿ ಗೌಡ

Kantara
Published on

ಬೆಂಗಳೂರು: ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲಂಸ್ ಕಾಂಬಿನೇಷನ್​ನಲ್ಲಿ ಸಿದ್ಧವಾಗುತ್ತಿರುವ ‘ಕಾಂತಾರ’ ಸಿನಿಮಾ ಸದ್ದಿಲ್ಲದೆ ಕುಂಭಾಶಿಯ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಶುಕ್ರವಾರ ಮುಹೂರ್ತ ಸಮಾರಂಭ ನಡೆದಿದ್ದು, ಶನಿವಾರದಿಂದ ಚಿತ್ರೀಕರಣಕ್ಕೂ ಚಾಲನೆ ನೀಡಿದೆ. ಹೀಗಿರುವಾಗಲೇ ಈ ಚಿತ್ರಕ್ಕೆ ನಾಯಕಿ ಯಾರೆಂಬ ವಿಚಾರವೂ ಬಹಿರಂಗವಾಗಿದೆ. ‘ಪಾಪ್​ಕಾರ್ನ್ ಮಂಕಿ ಟೈಗರ್’ ಸಿನಿಮಾ ಖ್ಯಾತಿಯ ನಟಿ ಸಪ್ತಮಿ ಗೌಡ ಈ ಚಿತ್ರದಲ್ಲಿ ರಿಷಬ್​ಗೆ ಜೋಡಿಯಾಗಲಿದ್ದಾರೆ.

‘ಪಾಪ್​ಕಾರ್ನ್ ಮಂಕಿ ಟೈಗರ್’ ಸಿನಿಮಾ ಬಳಿಕ ಒಳ್ಳೆಯ ಅವಕಾಶಕ್ಕಾಗಿ ಕಾದಿದ್ದ ಸಪ್ತಮಿ, ‘ಕಾಂತಾರ’ ಚಿತ್ರಕ್ಕೂ ಆಡಿಷನ್ ನೀಡಿದ್ದರು. ಕೊನೆಗೆ ಚಿತ್ರದ ಮುಹೂರ್ತದ ದಿನವೇ ನಾಯಕಿ ಆಯ್ಕೆ ವಿಚಾರವನ್ನು ಅವರ ಗಮನಕ್ಕೆ ತಂದು ಸರ್ಪ್ರೖೆಸ್ ನೀಡಿತ್ತಂತೆ ಚಿತ್ರತಂಡ. ಸದ್ಯ ಸದ್ದಿಲ್ಲದೆ ಕೆರಾಡಿ ಮತ್ತು ಹೆಮ್ಮಾಡಿ ಬಳಿ ಚಿತ್ರದ ಶೂಟಿಂಗ್ ಶುರುವಾಗಿದೆ. ಅಚ್ಯುತ್ ಕುಮಾರ್, ಕಿಶೋರ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು ಪ್ರಮುಖ ಪಾತ್ರದಲ್ಲಿದ್ದರೆ, ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net