ಬ್ರಿಟಿಷ್ ಸರಣಿಯಿಂದ ಸ್ಫೂರ್ತಿ ಪಡೆಯಿತು ‘ಕೆಜಿಎಫ್​’ ಅಧೀರನ ಲುಕ್​​!

collage (15)
Published on

ಸಂಜಯ್​ ದತ್​ ಜನ್ಮದಿನದ ಪ್ರಯುಕ್ತ, ಕೆಜಿಎಫ್​ ಚಿತ್ರತಂಡದಿಂದ ಅವರ ಫಸ್ಟ್ ಲುಕ್​ ಉಡುಗೊರೆ ರೂಪದಲ್ಲಿ ಸಿಕ್ಕಿದೆ. ಈ ಮೊದಲೇ ಕ್ರೌರ್ಯತೆಯ ಕರಾಳ ಮುಖವನ್ನು ಬಿಡುಗಡೆ ಮಾಡಿಕೊಳ್ಳುವುದಾಗಿ ಚಿತ್ರತಂಡ ಹೇಳಿತ್ತು. ಅದರಂತೆ ಇದೀಗ ಚಿತ್ರದಲ್ಲಿನ ಸಂಜಯ್​ ದತ್​ ಅವರ ಲುಕ್​ ಬಹಿರಂಗವಾಗಿದೆ. ವಿಲನ್​ ಅವತಾರದಲ್ಲಿ ಹಿಂದೆಂದೂ ನೋಡದ ಸಂಜಯ್​ ಇದೀಗ ಕೆಜಿಎಫ್​ನಲ್ಲಿ ಎದುರಾಗಿದ್ದಾರೆ. ಇದೆಲ್ಲದರ ಜತೆಗೆ ಅವರ ಲುಕ್​ ಬಗ್ಗೆಯೂ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಅಧೀರ ಲುಕ್​ ಕ್ರೂರತನದ ಪ್ರತೀಕ. ಆತನದ್ದು ಕ್ರೌರ್ಯ ತುಂಬಿದ ಮನಸ್ಸು ಎಂದು ಚಿತ್ರತಂಡ ಓ ಮೊದಲು ಹೇಳಿಕೊಂಡಿತ್ತು. ಅದಕ್ಕೆ ತಕ್ಕಂತೆ ಖಳನ ಖಡಕ್​ ಮುಖವನ್ನೇ ಕೆಜಿಎಫ್​ ತಂಡ ಬಿಡುಗಡೆ ಮಾಡಿದೆ. ಜತೆಗೆ ಈ ಲುಕ್​ನ ಸೃಷ್ಟಿಗೆ ಸ್ಫೂರ್ತಿ ಯಾರೆಂದೂ ಹೇಳಿಕೊಂಡಿದ್ದಾರೆ ನಿರ್ದೇಶಕರು.

2013ರಲ್ಲಿ  ವಿಕಿಂಗ್ಸ್ ಸರಣಿ ತೆರೆಕಂಡಿತ್ತು. ಒಟ್ಟು ಆರು ಸೀಸನ್​ಗಳಲ್ಲಿ ಕಂತುಗಳ ರೂಪದಲ್ಲಿ ಬಿಡುಗಡೆಯಾಗಿತ್ತು. ಆ್ಯಕ್ಷನ್​ ಶೈಲಿಯ ಈ ಸರಣಿಯಲ್ಲಿ ಪಾತ್ರಧಾರಿಗಳ ಅವತಾರವೇ ವಿಶೇಷ. ಇದೀಗ ಆ ಶೈಲಿಯನ್ನೇ ಕೆಜಿಎಫ್​ ಚಿತ್ರದಲ್ಲಿ ನಿರ್ದೇಶಕರು ಬಳಸಿಕೊಂಡಿದ್ದಾರೆ. ಖಳನಾಯಕನ ಕೂದಲು, ಕತ್ತಿ, ಧರಿಸಿರುವ ಉಡುಪು ಎಲ್ಲವೂ ವಿಚಿತ್ರ ಮತ್ತು ವಿಶೇಷ.

ಇನ್ನು ‘ಕೆಜಿಎಫ್ – ಚಾಪ್ಟರ್ 2’ ಸಿನಿಮಾ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡು, ಚಿತ್ರೀಕರಣೋತ್ತರ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಕರೊನಾ ಹಾವಳಿ ತಗ್ಗುತ್ತಿದ್ದಂತೆ ಬಾಕಿ ಉಳಿದ ಚಿತ್ರೀಕರಣ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೊಂಬಾಳೆ ಫಿಲಂಸ್ ಬ್ಯಾನರ್​ನಲ್ಲಿ ವಿಜಯಕುಮಾರ್ ಕಿರಗಂದೂರು ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net