ಶಿವನಪಾದದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ

Sangliana
Published on

ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಟಿ. ಸಾಂಗ್ಲಿಯಾನ ಅವರ ಸಾಹಸಗಳನ್ನಾಧರಿಸಿ ಮೂರು ಚಿತ್ರಗಳು ಬಿಡುಗಡೆಯಾಗಿರುವುದಷ್ಟೇ ಅಲ್ಲ, ಅವರು ‘ಸಂತ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ‘ಶಿವನ ಪಾದ’ ಎಂಬ ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿಯೇ ಮತ್ತೊಮ್ಮೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಮಾಚಂದ್ರು ನಿರ್ದೇಶನದ ‘ಶಿವನಪಾದ’ ಚಿತ್ರವು ಕ್ರೖೆಂ ಥ್ರಿಲ್ಲರ್ ಆಗಿದ್ದು, ಕೊಲೆಯೊಂದರ ಸುತ್ತ ಸುತ್ತುತ್ತದಂತೆ. ಸೀಶೋರ್ ಸ್ಟುಡಿಯೋಸ್​ನಲ್ಲಿ ಚಿತ್ರ ನಿರ್ವಣವಾಗುತ್ತಿದ್ದು, ನಾಗೇಶ್ ಆರ್. ಆನಂದ್, ವರ್ಷಿತಾ ಗಿರೀಶ್, ಮೇಘನಾ, ಬಲ ರಾಜವಾಡಿ ಸೇರಿ ಹಲವರು ಚಿತ್ರದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net