ದುಡ್ಡು ಕೊಟ್ಟು ಟ್ರೋಲ್​ ಮಾಡಿಸಿದರು: ನನಗೆ ಈ ಹಾಡಿನ ಅರ್ಥವೇ ಗೊತ್ತಿರಲಿಲ್ಲ; 'ಸರ್ಸೆ ನಿನ್ನ ಸೆರಗ ಸರ್ಸೆ' ವಿವಾದದ ಬಗ್ಗೆ ನೊರಾ ಹೇಳಿದ್ದೇನು? Nora Fatehi

ದುಡ್ಡು ಕೊಟ್ಟು ನನ್ನ ವಿರುದ್ಧ ಟ್ರೋಲ್​ ಮಾಡಿಸಿದ್ದಾರೆ: ನೊರಾ ಆರೋಪ
ದುಡ್ಡು ಕೊಟ್ಟು ನನ್ನ ವಿರುದ್ಧ ಟ್ರೋಲ್​ ಮಾಡಿಸಿದ್ದಾರೆ: ನೊರಾ ಆರೋಪ
Published on

ಪ್ರಮುಖ ಮುಖ್ಯಾಂಶಗಳು

  • ಕೆ.ಡಿ. ಸಿನಿಮಾದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡಿನ ವಿವಾದ
  • ಜೋಗಿ ಪ್ರೇಮ್​ ನಿರ್ದೇಶನದ ಸಿನಿಮಾ ಕೆ.ಡಿ: ದಿ ಡೆವಿಲ್​
  • ನನಗೆ ಈ ಹಾಡಿನ ಬಗ್ಗೆ ಮಾಹಿತಿ ಇರಲಿಲ್ಲ : ನೊರಾ
  • ದುಡ್ಡು ಕೊಟ್ಟು ನನ್ನ ವಿರುದ್ಧ ಟ್ರೋಲ್​ ಮಾಡಿಸಿದ್ದಾರೆ: ನೊರಾ ಆರೋಪ
ಮುಂಬೈ: ಕೆಲ ತಿಂಗಳುಗಳ ಹಿಂದೆ ಜೋಗಿ ಪ್ರೇಮ್​ ನಿರ್ದೇಶನದ ಕೆಡಿ: ದಿ ಡೆವಿಲ್​ ಸಿನಿಮಾದ ಸರ್ಸೆ ನಿನ್ನ ಸೆರಗ ಸರ್ಸೆ ಹಾಡು ಭಾರಿ ವಿವಾದಕ್ಕೆ ಕಾರಣವಾಗಿ ಆ ಹಾಡನ್ನು ಯೂಟ್ಯೂಬ್​ನಿಂದ ಬ್ಯಾನ್​ ಕೂಡ ಮಾಡಲಾಗಿತ್ತು.
ಈಗ ಈ ಘಟನೆ ಬಗ್ಗೆ ಹಾಡಿಗೆ ಹೆಜ್ಜೆ ಹಾಕಿದ್ದ ನೊರಾ ಫತೇಹಿ (Nora Fatehi) ಪಾಡ್​ಕಾಸ್ಟ್​ವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದು, ಸಿನಿಮಾ ಸೆಟ್​ನಲ್ಲಿ ಆಗಿದ್ದೇನು? ಹಾಡಿನ ಸಾಹಿತ್ಯದ ಬಗ್ಗೆ ತಮಗಿದ್ದ ಮಾಹಿತಿ ಏನು? ಹಾಗೂ ಆ ಹಾಡಿನ ನಂತರ ನಡೆದ ಟ್ರೋಲಿಂಗ್​ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ನನಗೆ ಈ ಹಾಡಿನ ಬಗ್ಗೆ ಮಾಹಿತಿಯೇ ಇರಲಿಲ್ಲ!

ಪಾಡ್​ಕಾಸ್ಟ್​ನಲ್ಲಿ ಮಾತನಾಡಿರುವ ನೊರಾ ಫತೇಹಿ, ಮೊದಲನೇದಾಗಿ ನನಗೆ ಈ ಹಾಡಿನ ಹಿಂದಿ ವರ್ಷನ್​ ಬಗ್ಗೆ ಮಾಹಿತಿ ಇರಲಿಲ್ಲ. ನಾನು ಡಾನ್ಸ್​ ಮಾಡಿದ ಹಾಡು ಇದಾಗಿರಲಿಲ್ಲ. ಇದನ್ನು ನಾನು ವಿವಾದವಾದಗ ಕೂಡ ವಿಡಿಯೋ ಮಾಡಿ ಹಂಚಿಕೊಂಡಿದ್ದೆ. ಆದರೆ ಜನ ಅದನ್ನು ನಂಬುವುದಿಲ್ಲ, ಆದರೆ ನನ್ನ ಬಳಿ ಇದಕ್ಕೆಲ್ಲಾ ಸಾಕ್ಷಿಯಿದೆ ಎಂದಿದ್ದಾರೆ.
ಆದರೆ, ನಾನು ಇಷ್ಟು ವರ್ಷ ಚಿತ್ರರಂಗದಲ್ಲಿದ್ದು, ಚರ್ಮವನ್ನು ದಪ್ವಾಗಿಸಿಕೊಂಡಿದ್ದೆನೆ. ಹೀಗಾಗಿ ಈ ಕೊಂಕು ಮಾತುಗಳು ನನಗೆ ತಟ್ಟುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಯೂಟ್ಯೂಬ್​ನಲ್ಲಿ ಬಿಡುಗಡೆಯಾದ ಹಾಡು ಸಂಪೂರ್ಣವಾದ ಹಾಡಾಗಿರಲಿಲ್ಲ. ಅದು ಕೃತಕ ಬುದ್ದಿಮತ್ತೆ ಸಹಾಯದಿಂದ ಸೃಷ್ಟಿಸಿದ ಕೆಲವೇ ನಿಮಿಷಗಳ ಕ್ಲಿಪ್​ ಆಗಿತ್ತು. ಆದರೂ ಬೇಕಂತಲೇ ನನ್ನನ್ನು ಟಾರ್ಗೆಟ್​ ಮಾಡಿಕೊಂಡು. ಈ ಹಾಡಿನ ಮೂಲಕ ನನ್ನ ತೇಜೋವಧೆ ಸಾಕಷ್ಟು ನಡೆಯಿತು, ಸಾಕಷ್ಟು ಟ್ರೋಲಿಂಗ್​ ಕೂಡ ಮಾಡಲಾಯಿತು.

ನನಗೆ ಕನ್ನಡ ಬರುತ್ತಿರಲಿಲ್ಲ!


ಹಾಗೆಯೇ, ಈ ಸಿನಿಮಾ ಮೂಲ ಕನ್ನಡದಲ್ಲಿ ಕಂಡುಬಂದಿತ್ತು. ನನಗೆ ಆ ಭಾಷೆ ಬರುವುದಿಲ್ಲ, ಮತ್ತು ಈ ಹಾಡಿನ ಶೂಟಿಂಗ್​ ನಾನು ವರ್ಷಗಳ ಹಿಂದೆ ಮಾಡಿದ್ದೆ, ಅದಕ್ಕೆ ನನ್ನ ಒಪ್ಪಿಗೆ ಸಹ ಇತ್ತು. ಏಕೆಂದರೆ ಈ ಹಾಡು ಸಿನಿಮಾಗೆ ಅಗತ್ಯವಾಗಿತ್ತು ಮತ್ತು ಸಂಜಯ್​ ದತ್ ಅವರ ಜೊತೆ ಕಾಣಿಸಿಕೊಳ್ಳಲು ನಾನು ಹೇಗೆ ಇಲ್ಲ ಎನ್ನಲಿ? ಹೀಗಾಗಿ ನಿರ್ದೇಶಕರು ಹೇಗೆ ಹೇಳಿದರೋ ಹಾಗೆ ಮಾಡಿದೆ.
ಕನ್ನಡ ನನಗೆ ಬರುತ್ತಿರಲಿಲ್ಲ, ಆದರೆ ಹಾಡನ್ನು ಕೇಳಿಸಿಕೊಂಡಾಗ ನಾನು ಇದು ನಾಯಕ್​ ನಹಿ ಕಳನಾಯಕ್​ ಹೂ ಮೇ ಹಾಡಿನ ರೀತಿಯ ಹಾಡು ಎಂದು ಭಾವಿಸಿದ್ದೆ ಮತ್ತು ಒಪ್ಪಿಗೆ ನೀಡಿದ್ದೆ. ಆದರೆ ಹಿಂದೆ ಭಾಷಾಂತರಕ್ಕೆ ನನ್ನ ಬಳಿ ಯಾರೂ ಒಪ್ಪಿಗೆಯನ್ನು ಕೇಳಿಲ್ಲ ಹಾಗೂ ನಾನು ಒಪ್ಪಿಗೆ ಕೂಡ ನೀಡಿರಲಿಲ್ಲ ಎಂದು ನೊರಾ ಹೇಳಿದ್ದಾರೆ.

ಪ್ರೇಮ್​ ಜೊತೆ ಮಾತನಾಡಿದ್ದೆ!

ಈ ಹಾಡಿನ ಹಿಂದಿ ವರ್ಷನ್​ ಬಿಡುಗಡೆಯಾದಾಗ ನನಗೆ ಇದು ವಿವಾದವಾಗುತ್ತೆಂದು ತಿಳಿದಿತ್ತು. ನಾನು ನಿರ್ದೇಶಕ ಪ್ರೇಮ್​ ಅವರಿಗೆ ಕರೆ ಮಾಡಿ ನನಗೆ ಇದು ಬ್ಯಾಕ್ಲಾಶ್​ ಆಗುತ್ತೆ, ನನ್ನ ಹೆಸರು ಮತ್ತು ಗೌರವ ಹಾಳಾಗುತ್ತಿದೆ. ನಾನು ಈ ಸಿನಿಮಾವನ್ನು, ಇದರ ಹಾಡನ್ನು ಎಲ್ಲಿಯೂ ಸಹ ಪ್ರಚಾರ ಮಾಡಲ್ಲ ಎಂದು ಹೇಳಿದ್ದೆ ಮತ್ತು ನಾನು ಎಲ್ಲಿ ಕೂಡ ಪ್ರಚಾರ ಮಾಡಿಲ್ಲ ಎಂದು ನಟಿ ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net