ಧೋನಿಗೆ ಶಾಕ್​ ಕೊಟ್ಟ CSK​: ಶೇ. 25 ಪಾಲುದಾರಿಕೆ ಕೇಳಿದ ಕ್ಯಾಪ್ಟನ್​ ಕೂಲ್​; ಮ್ಯಾನೇಜ್​ಮೆಂಟ್​ 'ನೋ' ಎಂದಿದ್ದೇಕೆ? M S Dhoni

CSK ಫ್ರಾಂಚೈಸಿಯಲ್ಲಿ ಶೇ. 25ರಷ್ಟು ಪಾಲುದಾರಿಕೆ ಕೇಳಿದ ಮಹೇಂದ್ರ ಸಿಂಗ್ ಧೋನಿ
CSK ಫ್ರಾಂಚೈಸಿಯಲ್ಲಿ ಶೇ. 25ರಷ್ಟು ಪಾಲುದಾರಿಕೆ ಕೇಳಿದ ಮಹೇಂದ್ರ ಸಿಂಗ್ ಧೋನಿ
Published on

ಪ್ರಮುಖ ಮುಖ್ಯಾಂಶಗಳು

  • CSK ಫ್ರಾಂಚೈಸಿಯಲ್ಲಿ ಶೇ. 25ರಷ್ಟು ಪಾಲುದಾರಿಕೆ ಕೇಳಿದ ಮಹೇಂದ್ರ ಸಿಂಗ್ ಧೋನಿ
  • ಕ್ಯಾಪ್ಟನ್ ಕೂಲ್ ಬೇಡಿಕೆಯನ್ನು ತಿರಸ್ಕರಿಸಿದ CSK ಮ್ಯಾನೇಜ್​ಮೆಂಟ್​
  • ಧೋನಿಗೆ ಕೇಳಿದಷ್ಟು ಕೊಡಲು ಒಪ್ಪದಿರಲು ಕಾರಣವೇನು?
ಚೆನ್ನೈ:

ಮಹೇಂದ್ರ ಸಿಂಗ್​ ಧೋನಿ (M S Dhoni) ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ಸಂಬಂಧ ನೆನ್ನೆ-ಮೊನ್ನೆಯದಲ್ಲ. 2008 ರಲ್ಲಿ ಐಪಿಎಲ್​ ಆರಂಭವಾದ ವರ್ಷದಿಂದ ಧೋನಿ, ಸಿಎಸ್​ಕೆ ತಂಡವನ್ನು ಮುನ್ನಡೆಸಿ, ಯಶಸ್ವಿ ನಾಯಕನಾಗಿ ಹಾಗೂ ತಂಡವನ್ನು ಯಶಸ್ವಿ ತಂಡವನ್ನಾಗಿ ಮಾಡುವಲ್ಲಿ ಕ್ಯಾಪ್ಟನ್​ ಕೂಲ್​ ಪಾತ್ರ ದೊಡ್ಡದಿದೆ.


ಆದರೆ, ಈಗ ಧೋನಿಗೆ 45 ವರ್ಷವಾಗಿದ್ದು, ಮೈದಾನದಲ್ಲಿ ಮೊದಲಿನ ಮೋಡಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಧೋನಿ ಈಗ ಸಿಎಸ್​ಕೆ ತಂಡದಲ್ಲಿ ಪಾಲುದಾರನಾಗಲು ಮನಸ್ಸು ಮಾಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಇದಕ್ಕೆ ತಂಡದ ಮ್ಯಾನೇಜ್​ಮೆಂಟ್​ ಅಷ್ಟು ಮನಸ್ಸು ಮಾಡುತ್ತಿಲ್ಲ ಎಂಬ ಆಂತರಿಕ ಮಾಹಿತಿ ಲಭ್ಯವಾಗಿದೆ.

25% ಶೇರ್​ ಕೊಡಿ!

ದೊರೆತಿರುವ ಮಾಹಿತಿಯಂತೆ ಧೋನಿ ನಾಯಕತ್ವದಲ್ಲಿ ಸಿಎಸ್​ಕೆ ತಂಡ ಇಲ್ಲಿವರೆಗೆ ಐದು ಬಾರಿ ಚಾಂಪಿಯನ್ಸ್​ ಆಗುವ ಮೂಲಕ ಐಪಿಎಲ್​​ ನಲ್ಲಿ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ. ಈ ಸಾಧನೆ ಮಾಡುವಲ್ಲಿ ಧೋನಿ ಪಾತ್ರ ಪ್ರಮುಖವಾಗಿತ್ತು ಎನ್ನುವುದರಲ್ಲಿ ಸಂಶಯವಿಲ್ಲ.

ತಂಡದೊಂದಿಗೆ ಸುಮಾರು 19-20 ವರ್ಷಗಳ ಸಂಬಂಧವಿರುವ ಸಲುಗೆಯ ಮೇಲೆ ಧೋನಿ ತಂಡದ ಮಾಲೀಕತ್ವದಲ್ಲಿ ಶೇ. 25 ರಷ್ಟು ಪಾಲುದಾರಿಕೆಯನ್ನು ಕೇಳಿದ್ದಾರೆ. ಆದರೆ ಅದನ್ನು ನೀಡಲು ಮ್ಯಾನೇಜ್​ಮೆಂಟ್​ ಒಪ್ಪುತ್ತಿಲ್ಲ ಎಂದು ತಿಳಿದು ಬಂದಿದೆ.


ಧೋನಿ ಶೇ. 25 ಕೇಳಿದಕ್ಕೆ ಮ್ಯಾನೇಜ್​ಮೆಂಟ್​ ಶೇ. 4 ಪಾಲುದಾರಿಕೆ ಕೊಡಲು ಮುಂದಾದಾಗ, ಧೋನಿ 25 ಬೇಡ ಕನಿಷ್ಟ ಶೇ. 20 ರಷ್ಟು ಪಾಲುದಾರಿಕೆ ಕೊಡಿ ಎಂದಾಗ ವ್ಯವಸ್ಥಾಪಕ ಮಂಡಳಿಯವರು ಶೇ. 5.5 ಕ್ಕಿಂಗ ಹೆಚ್ಚು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಆದರೆ, ಈ ಎಲ್ಲಾ ವ್ಯವಹಾರ ಕೇವಲ ಧೋನಿ ಮತ್ತು ಸಿಎಸ್​ಕೆ ಮ್ಯಾನೇಜ್​ಮೆಂಟ್​ ನಡುವೆ ಮಾತುಕತೆ ಮೂಲಕ ನಡೆದಿದೆ ಹೊರತು ಯಾವುದೇ ಲಿಖಿತ ರೂಪದಲ್ಲಿ ನಡೆದಿದೆ ಎಂದು ಪುರಾವೆಗಳು ದೊರೆತಿಲ್ಲ.

ಧೋನಿ ವೀಕ್​ ಆಗಿದ್ದಾರೆ!

ಈಗ ಧೋನಿಗೆ 45 ವರ್ಷ ಮೊದಲು ಗ್ರೌಂಡ್​ನಲ್ಲಿ ಮಾಡುತ್ತಿದ್ದ ಬ್ಯಾಟಿಂಗ್​​ ಮಾಡಲು ಸಾಧ್ಯವಾಗುತ್ತಿಲ್ಲ. 2026 ರ ಐಪಿಎಲ್​ನಲ್ಲಿ ಸಿಎಸ್​ಕೆ ತಂಡ 4 ಕೋಟಿ ಕೊಟ್ಟು ಧೋನಿಯನ್ನು ಉಳಿಸಿಕೊಂಡಿತು. ಆದರೆ ಅವರು ಒಂದೇ ಒಂದು ಪಂದ್ಯವನ್ನು ಆಡಲಿಲ್ಲ.
ಅಷ್ಟೇ ಅಲ್ಲದೇ ಕಳೆದ ಕೆಲವು ಸೀಸನ್​ಗಳಲ್ಲಿ ಸಿಎಸ್​ಕೆ ತಂಡ ನಿರಸ ಪ್ರದರ್ಶನ ನೀಡುತ್ತಿದ್ದು, ಇದು ಮ್ಯಾನೇಜ್​ಮೆಂಟ್​ಗೆ ತಲೆನೋವಾಗಿ ಪರಿಣಮಿಸಿದೆ. ಧೋನಿಯಿಂದ ತಂಡದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗುವ ಸಾಧ್ಯತೆ ಕಡಿಮೆಯಿರುವಾಗ ಅವರನ್ನು ಏಕೆ ಪಾಲುದಾರರನ್ನಾಗಿ ಮಾಡಿಕೊಳ್ಳುತ್ತಾರೆ? ಎನ್ನುವುದು ಸಿಎಸ್​ಕೆ ತಂಡದ ಗುಪ್ತವಾರ್ತೆಯಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net