

ಬೆಂಗಳೂರು: ಜೋಶ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿ, ನಂತರ ಬಿಗ್ಬಾಸ್ ಓಟಿಟಿ ಹಾಗೂ ಕನ್ನಡ ಬಿಗ್ಬಾಸ್ ಸೀಸನ್ 9 ರ ರನ್ನರ್ ಆಗಿ ಹೊರಹೊಮ್ಮಿದ್ದ ರಾಕೇಶ್ ಅಡಿಗ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇವರ ಎಂಗೇಜ್ಮೆಂಟ್ ಫೋಟೊಗಳು ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿವೆ.
ಈ ಶುಭ ಸಮಾರಂಭವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದ್ದು, ಗುರು-ಹಿರಿಯರ, ಬಂಧು-ಮಿತ್ರರ ಸಮ್ಮುಖದಲ್ಲಿ ರಾಕೇಶ್ ತಮ್ಮ ಭಾವಿ ಪತ್ನಿ ಮಾಧುರಿ ಸಿಂಗ್ ಜತೆ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಸಪ್ತಪದಿ ತುಳಿದು, ದಾಪಂತ್ಯ ಜೀವನ ಆರಂಭಿಸಲಿದ್ದಾರೆ.
ಕೆಲ ದಿನಗಳ ಹಿಂದೆ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ನಟ ರಾಕೇಶ್ ಅಡಿಗ, ತಮ್ಮ ನಿರೀಕ್ಷೆಗೆ ತಕ್ಕ ಹುಡುಗಿ ಸಿಕ್ಕಿದ್ದಾರೆ ಎನ್ನುವುದಕ್ಕಿಂತ, ತಮ್ಮ ಜೀವನಕ್ಕೆ ಅಗತ್ಯವಿರುವಂತಹ ವ್ಯಕ್ತಿ ಸಿಕ್ಕಿದ್ದಾರೆ ಎನ್ನಬಹುದು. ನಾನು ಒಬ್ಬ ಬೆಟರ್ ಪರ್ಸನ್ ಆಗೋದಕ್ಕೆ ಯಾವ ತರಹ ಬೇಕೋ, ಆ ತರಹ ಹುಡುಗಿ ಸಿಕ್ಕಿದ್ದಾರೆ ಎಂದು ಅವರು ಹೇಳಿದ್ದರು. ಈ ಹೇಳಿಕೆ ಕೇಳಿ ಬಂದ ನಂತರ ಅವರ ಮದುವೆ ವಿಚಾರ ಮುನ್ನಲೆಗೆ ಬಂದಿತ್ತು.
2009 ರಲ್ಲಿ ಕಾಲೇಜ್ ಡ್ರಾಮಾ ಜೋಶ್ ಸಿನಿಮಾ ಮೂಲಕ ರಾಕೇಶ್ ಅಡಿಗ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಲೂಸ್ ಮಾದ ಯೋಗಿ ನಟನೆಯ ಅಲೆಮಾರಿ ಸಿನಿಮಾದಲ್ಲಿ ರಾಕೇಶ್ ಅಭಿನಯಕ್ಕೆ ಅಪಾರ ಪ್ರಶಂಸೆ ವ್ಯಕ್ತವಾಗಿತ್ತು.
ಮನಸಾಲಜಿ, ಮಂದಹಾಸ, ಪ್ರೀತಿಯಿಂದ, ಮಂಡ್ಯ ಟು ಮುಂಬೈ, ನಟೋರಿಯಸ್ ಮೊದಲಾದ ಸಿನಿಮಾಗಳಲ್ಲಿ ರಾಕೇಶ್ ಕಾಣಿಸಿಕೊಂಡಿದ್ದಾರೆ. ನಂತರ ಕನ್ನಡ ಬಿಗ್ಬಾಸ್ನಲ್ಲಿ ಮೊದಲ ಬಾರಿಗೆ ನಡೆದ ಓಟಿಟಿ ಸೀಸನ್ನಲ್ಲಿ ಭಾಗವಹಿಸಿದ ರಾಕೇಶ್, ಬಿಗ್ಬಾಸ್ ಸೀಸನ್ 9 ರ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.