‘‘ಕೊರಗಜ್ಜ’ ಚಿತ್ರದ ಶೇ.60ರಷ್ಟು 3ಡಿ ಕಾರ್ಯಗಳು ಪೂರ್ಣಗೊಂಡಿದ್ದು, ಸದ್ಯದಲ್ಲಿ ಸಿನಿಮಾ ರಿಲೀಸ್ ಡೇಟ್ ಘೋಷಿಸಲಾಗುವುದು’ ಎಂದ ಸುಧೀರ್ ಅತ್ತಾವರ, ‘ಈ ಹಿಂದೆ ಮಂಗಳೂರಿನಲ್ಲಿ ಕೋಲ ಸೇವೆ ನೆರವೇರಿಸಿದ್ದೆವು. ಇದೀಗ ಅಗೆಲು ಸೇವೆ ಅರ್ಪಿಸುತ್ತಿದ್ದೇವೆ. ಸಿನಿಮಾ ಆರಂಭವಾಗಿನಿಂದಲೂ ಕೊರಗಜ್ಜನ ಅಭಯ ನಮ್ಮ ಮೇಲಿದೆ. ಚಿತ್ರಕ್ಕೆ 3ಡಿ, ಎಐ, ವಿಎಫ್ಎಕ್ಸ್ ಬಳಸಿಕೊಳ್ಳಲಾಗಿದೆ. ಹಿಂದಿಯ ‘ತ್ರಿ ಈಡಿಯಟ್ಸ್’ಗೆ ಕೆಲಸ ಮಾಡಿದ್ದ ತಂತ್ರಜ್ಞರೇ ನಮ್ಮ ಚಿತ್ರಕ್ಕೂ ಕೆಲಸ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಬಿಡುಗಡೆ ಸಂಬಂಧ ಬಿಜಿನೆಸ್ ಮಾತುಕತೆ ಕೂಡ ನಡೆಯುತ್ತಿದೆ. ಚೀನಾ ಭಾಷೆಗೂ ಸಿನಿಮಾ ಡಬ್ ಆಗಲಿದ್ದು, ಕನ್ನಡ ಸೇರಿ ಎಂಟು ಭಾಷೆಗಳಲ್ಲಿ ಚಿತ್ರ ಮೂಡಿಬರಲಿದೆ. ನಿರ್ಮಾಪಕರು ಐಷಾರಾಮಿ ಗಿಫ್ಟ್ ನೀಡಿರುವುದು ಖುಷಿ ತಂದಿದೆ’ ಎಂದು ಸಂತಸ ವ್ಯಕ್ತಪಡಿಸಿದರು.