

ಬೆಂಗಳೂರು: ಕರೊನಾ ಮತ್ತು ಲಾಕ್ಡೌನ್ನಿಂದಾಗಿ ಈ ವರ್ಷ ಎಲ್ಲಾ ಹಬ್ಬಗಳ ಆಚರಣೆ ಮತ್ತು ಸಂಭ್ರಮದಲ್ಲಿ ವ್ಯತ್ಯಾಸವಾಗಿದೆ. ಇದಕ್ಕೆ ದೀಪಾವಳಿ ಸಹ ಹೊರತಲ್ಲ. ಈ ಬಾರಿ ಪಟಾಕಿಗಳಿಗೆ ಸರ್ಕಾರ ನಿಷೇಧ ಹೇರಿದ್ದು, ಅದರಿಂದ ಕೊಂಚ ಸಂಭ್ರಮ ತಗ್ಗಿದೆ. ಈ ಮಧ್ಯೆ ಚಂದನವನದ ತಾರೆಯರೆಲ್ಲಾ ತಮ್ಮ ಅಭಿಮಾನಿಗಳಿಗೆ ತಮ್ಮದೇ ರೀತಿಯಲ್ಲಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಕೋರಿದ್ದಾರೆ.
ಇದನ್ನೂ ಓದಿ: ಈ ‘ವಿಂಡೋ ಸೀಟ್’ನಲ್ಲಿ ಏನಿದೆ ಗೊತ್ತಾ? ನೀವೇ ನೋಡಿ …
ಬರೀ ನಟ-ನಟಿಯರು, ತಂತ್ರಜ್ಱರು ಮಾತ್ರವಲ್ಲ, ಹಲವು ಚಿತ್ರತಂಡದವರು ನಾಡಿನ ಜನತೆಗೆ ಶುಭಾಶಯ ಕೋರುವುದರ ಜತೆಗೆ, ತಮ್ಮ ಚಿತ್ರ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ', ಧನವೀರ್ ಗೌಡ ಅಭಿನಯದ 'ಬಂಪರ್', ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ', ಪ್ರಮೋದ್ ಅಭಿನಯದ 'ಇಂಗ್ಲೀಷ್ ಮಂಜ', ಶ್ರೀಮುರಳಿ ಅಭಿನಯದ 'ಮದಗಜ', ರಚಿತಾ ರಾಮ್ ಅಭಿನಯದ 'ಪಂಕಜ ಕಸ್ತೂರಿ', 'ನೆನಪಿರಲಿ' ಪ್ರೇಮ್ ಅಭಿನಯದ 'ಪ್ರೇಮಂ ಪೂಜ್ಯಂ', ದರ್ಶನ್ ಅಭಿನಯದ 'ರಾಬರ್ಟ್', 'ದುನಿಯಾ' ವಿಜಯ್ ಅಭಿನಯದ 'ಸಲಗ', 'ಮದರಂಗಿ' ಕೃಷ್ಣ ಅಭಿನಯದ 'ಶ್ರೀಕೃಷ್ಣ @ಜಿಮೇಲ್ಡಾಟ್ಕಾಂ' ಚಿತ್ರತಂಡಗಳು ಶುಭಕೋರಿವೆ.