More

    ಈ ‘ವಿಂಡೋ ಸೀಟ್​’ನಲ್ಲಿ ಏನಿದೆ ಗೊತ್ತಾ? ನೀವೇ ನೋಡಿ …

    ಬೆಂಗಳೂರು: ಲಾಕ್​ಡೌನ್​ಗೂ ಮುನ್ನವೇ ಸದ್ದಿಲ್ಲದೆ ‘ವಿಂಡೋ ಸೀಟ್​’ ಚಿತ್ರೀಕರಣವನ್ನು ಮುಗಿಸಿದ್ದ ನಟಿ-ನಿರೂಪಕಿ ಶೀತಲ್​ ಶೆಟ್ಟಿ, ಇದೀಗ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈಗಾಗಲೇ ಚಿತ್ರದ ಪ್ರಚಾರ ಶುರುವಾಗಿದ್ದು, ಕಳೆದ ತಿಂಗಳು ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆಯಾಗಿತ್ತು. ಇದೀಗ ಚಿತ್ರದ ಮೊದಲ ಟೀಸರ್​ ಬಿಡುಗಡೆಯಾಗಿದೆ.

    ಇದನ್ನೂ ಓದಿ: ತಾರಾವಳಿ| ಕುಟುಂಬದ ಜತೆಗೆ ಹಬ್ಬದೂಟ: ಅಮೃತಾ ಅಯ್ಯಂಗಾರ್​

    ನಾಯಕನ ಜೀವನವನ್ನು ಪರಿಚಯಿಸುವ ದೃಶ್ಯಗಳಿಂದ ಪ್ರಾರಂಭವಾಗುವ ಈ ಟೀಸರ್​, ಕ್ರಮೇಣ ಗಂಭೀರವಾಗುತ್ತಾ ಹೋಗುತ್ತದೆ. ಆರಂಭದಲ್ಲಿ ಇದೊಂದು ಪ್ರೇಮಕಥೆ ಇರಬಹುದು ಎಂದನಿಸಿ, ಥ್ರಿಲ್ಲರ್​ ಅಂಶಗಳೊಂದಿಗೆ ಮುಕ್ತಾಯವಾಗುತ್ತದೆ. ಈಗಾಗಲೇ ಈ ಟೀಸರ್​ ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಿದ್ದು, ಟ್ರೆಂಡ್​ ಆಗುತ್ತಿದೆ.

    ವಿಶೇಷ ಏನೆಂದರೆ, ನಿರ್ಮಾಪಕ ಜಾಕ್​ ಮಂಜು ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು, ಕಿಚ್ಚ ಕ್ರಿಯೇಷನ್​ ಅರ್ಪಿಸುತ್ತಿದೆ. ಸ್ವತಃ ಸುದೀಪ್​ ಸೋಷಿಯಲ್​ ಮೀಡಿಯಾದಲ್ಲಿ ‘ವಿಂಡೋ ಸೀಟ್​’ ಚಿತ್ರದ ಟೀಸರ್​ ಬಗ್ಗೆ ಮೆಚ್ಚುಗೆ ಮೆಚ್ಚುಗೆ ವ್ಯಕ್ತಪಡಿಸಿ ಫಸ್ಟ್​ಲುಕ್​ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ತಾರಾವಳಿ| ರಂಗೋಲಿಯ ಉಸ್ತುವಾರಿ ನನ್ನದು: ಶಾನ್ವಿ ಶ್ರೀವಾಸ್ತವ

    ‘ಆದಿಲಕ್ಷ್ಮೀ ಪುರಾಣ’ ಚಿತ್ರದ ನಂತರ ನಿರೂಪ್​ ಭಂಡಾರಿ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಸಂಜನಾ ಆನಂದ್ ಮತ್ತು ಅಮೃತಾ ಅಯ್ಯಂಗಾರ್​ ನಾಯಕಿಯರಾಗಿದ್ದಾರೆ. ಮಿಕ್ಕಂತೆ ರವಿಶಂಕರ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

    ಮಾಲ್ಡೀವ್ಸ್​ನಲ್ಲಿ ತಾರೆಯರ ಮೋಜು-ಮಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts