ಸ್ಯಾಂಡಲ್​ವುಡ್ ಗೋಕುಲಾಷ್ಟಮಿ; ಮಕ್ಕಳ ಕೃಷ್ಣನ ವೇಷದ ಫೋಟೋ ಹಂಚಿಕೊಂಡ ಸೆಲೆಬ್ರಿಟಿಗಳು

Gokulashtami
ಮಗನ ಜತೆ ಮೇಘನಾ ರಾಜ್, ಅಪೇಕ್ಷಾ ಪುರೋಹಿತ್ ಪುತ್ರ ಶೌರ್ಯ, ಮಗನೊಂದಿಗೆ ಶರಣ್.
Published on

ಬೆಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸೋಮವಾರ ಇಡೀ ದೇಶ ಆಚರಿಸಿದೆ. ಜನ ಸಾಮಾನ್ಯರು ತಮ್ಮ ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಸಂಭ್ರಮಿಸಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಈ ವಿಷಯದಲ್ಲಿ ಕನ್ನಡ ಚಿತ್ರರಂಗ ಸಹ ಹಿಂದೆ ಬಿದ್ದಿಲ್ಲ. ಚಿತ್ರರಂಗದ ಹಲವು ನಟ-ನಟಿಯರು ಮತ್ತು ತಂತ್ರಜ್ಞರು ತಮ್ಮ ಮಕ್ಕಳು, ಕೃಷ್ಣನ ವೇಷದಲ್ಲಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಸಾಮಾನ್ಯವಾಗಿ ನಟಿ ಶ್ವೇತಾ ಶ್ರೀವಾತ್ಸವ್, ಪ್ರತಿ ಹಬ್ಬಕ್ಕೂ ಮಗಳ ಜತೆಗೆ ವಿಶೇಷ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಈ ಬಾರಿಯೂ ಅದನ್ನು ಮುಂದುವರೆಸಿರುವ ಅವರು, ಮಗಳಿಗೆ ಕೃಷ್ಣನ ವೇಷ ತೊಡಿಸಿ, ತಾವು ರಾಧೆಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಮೇಘನಾ ರಾಜ್, ಅಪೇಕ್ಷಾ ಪುರೋಹಿತ್, ನಯನಾ ಪುಟ್ಟಸ್ವಾಮಿ ಮುಂತಾದವರು ಮನೆಯಲ್ಲೇ ತಮ್ಮ ಮಕ್ಕಳಿಗೆ ಬಾಲಗೋಪಾಲರ ವೇಷ ತೊಡಿಸಿ, ಫೋಟೋ ಕ್ಲಿಕ್ಕಿಸಿದ್ದಾರೆ. ಇನ್ನು, ಶರಣ್ ತಮ್ಮ ಮಗನ ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ. ಫೋಟೋಗಳ ಜತೆಗೆ ಎಲ್ಲರೂ, ನಾಡಿನ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳನ್ನು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net