More

    ಶಿಕ್ಷಕರ ದಿನಾಚರಣೆಯ ಮರುದಿನವೇ ಶಾಲೆ ಶುರು; 6, 7, 8ರ ಭೌತಿಕ ತರಗತಿ ಆರಂಭಕ್ಕೆ ಅಸ್ತು

    ಬೆಂಗಳೂರು: ಬಹಳ ದಿನಗಳಿಂದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಕುತೂಹಲದಿಂದ ಕಾಯುತ್ತಿದ್ದ ನಿರ್ಧಾರವೊಂದು ಪ್ರಕಟಗೊಂಡಿದ್ದು, ಶಾಲೆಗಳ ಭೌತಿಕ ತರಗತಿ ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅಧ್ಯಕ್ಷತೆಯಲ್ಲಿ ನಡೆದ ಕರೊನಾ ಉನ್ನತಮಟ್ಟದ ಸಭೆ ಬಳಿಕ ಸಚಿವ ಆರ್. ಅಶೋಕ್ ಈ ವಿಷಯ ತಿಳಿಸಿದ್ದಾರೆ.

    ಶಿಕ್ಷಕರ ದಿನಾಚರಣೆಯ ಮರುದಿನವೇ ಅಂದರೆ ಸೆಪ್ಟೆಂಬರ್ 6ರಂದು 6, 7, 8ನೇ ಇಯತ್ತೆಯ ಭೌತಿಕ ತರಗತಿಗಳನ್ನು ಆರಂಭಿಸಲು ಸರ್ಕಾರ ಅಸ್ತು ಎಂದಿದೆ. ಆದರೆ ವಾರದಲ್ಲಿ ಐದು ದಿನ, ದಿನ ಬಿಟ್ಟು ದಿನ ತರಗತಿ ನಡೆಸಲು ಅವಕಾಶ ಕಲ್ಪಿಸಿದೆ. ಅದರಲ್ಲೂ ಪಾಸಿಟಿವಿಟಿ ದರ ಶೇ. 2ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ ಮಾತ್ರ 6, 7, 8ನೇ ತರಗತಿಗಳನ್ನು ತೆರೆಯಬಹುದಾಗಿದೆ.

    ಇನ್ನು ಮೂರನೇ ಅಲೆ ಪ್ರವೇಶ ಸಾಧ್ಯತೆ ಹಿನ್ನೆಲೆಯಲ್ಲಿ ಹತೋಟಿಗೆ ಹಲವು ಕ್ರಮಕೈಗೊಳ್ಳಲು ಸರ್ಕಾರ ನಿರ್ಧರಿಸಿದ್ದು, ತಜ್ಞರ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಹಾಗೂ ವರದಿ ಕುರಿತು ವಿಸ್ತೃತವಾಗಿ ಚರ್ಚೆ ಮಾಡಿದೆ.

    ಕೇರಳದಲ್ಲಿ ಸೋಂಕು ಉಲ್ಬಣಗೊಂಡಿದ್ದು, ಅಲ್ಲಿಂದ ರಾಜ್ಯಕ್ಕೆ ಬಂದವರಿಗೆ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿದ್ದು, ನಂತರ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೊಡಗು, ಉಡುಪಿ, ಹಾಸನ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮೈಸೂರು, ಚಿಕ್ಕಮಗಳೂರು, ಕಲಬುರಗಿ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಸಡಿಲಗೊಳಿಸಲಾಗಿದೆ. ಮದುವೆ ಸಮಾರಂಭಗಳನ್ನು ದೊಡ್ಡ ಕಲ್ಯಾಣ ಮಂಟಪಗಳಲ್ಲಿ 400 ಮಂದಿ, ಸಣ್ಣ ಕಲ್ಯಾಣ ಮಂಟಪಗಳಲ್ಲಿ ಅರ್ಧಕ್ಕರ್ಧಷ್ಟು ಆಸನ ಭರ್ತಿಯೊಂದಿಗೆ ನಡೆಸಬಹುದು ಎಂದು ಅವರು ತಿಳಿಸಿದ್ದಾರೆ.

    ಒಂದೂವರೆ ವರ್ಷದ ಮಗುವಿಗೆ ಹೊಡೆದು ವಿಕೃತವಾಗಿ ವರ್ತಿಸಿದ್ದ ತಾಯಿಯ ಬಂಧನ; ಗಂಡನ ಮೇಲೆ ಸಿಟ್ಟಿಗೆ ಮಗುವಿಗೆ ಹಿಂಸೆ…

    ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆ; ಹೆಂಡ್ತಿಯನ್ನು ಉಸಿರುಗಟ್ಟಿಸಿ ಕೊಂದ ಗಂಡ ತಾನು ನೇಣು ಬಿಗಿದುಕೊಂಡ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts