More

    ಪರಿಸರ ಆರಾಧನೆಗೆ ಆದ್ಯತೆ ನೀಡಿ

    ಹಗರಿಬೊಮ್ಮನಹಳ್ಳಿ: ತಾಲೂಕಿನ ಚಿಮ್ಮನಹಳ್ಳಿ ಐತಿಹಾಸಿಕ ಶ್ರೀ ದುರ್ಗಾಂಭಿಕೆ ದೇವಸ್ಥಾನದ ಆವರಣದಲ್ಲಿ ಅಮಾವಾಸ್ಯೆ ನಿಮಿತ್ತ ಭಕ್ತರಿಂದ ಸಸಿಗಳನ್ನು ನೆಡುವ ಮೂಲಕ ವನಸಿರಿ ಕಾರ್ಯಕ್ರಮ ಬುಧವಾರ ನಡೆಯಿತು.

    ಇದನ್ನು ಓದಿ:ಕೈ ಮುಗಿದು ಒಳಗೆ ಬಾ ಮತದಾರನೆ.. ಪರಿಸರ, ಸಾಮಾಜಿಕ ಜಾಗೃತಿ ಸಾರುವ ಮತಗಟ್ಟೆಗಳು ಸಂಪ್ರದಾಯಗಳ ಪ್ರತಿಬಿಂಬ


    ದೇವಸ್ಥಾನ ಸಮಿತಿ ಅಧ್ಯಕ್ಷ ಪೂಜಾರ ಸಿದ್ದಪ್ಪ ಮಾತನಾಡಿ, ಹೆಚ್ಚುತ್ತಿರುವ ತಾಪಮಾನ ತಗ್ಗಿಸಲು ವನಸಿರಿ ಕಾರ್ಯಕ್ರಮ ಆಯೋಜಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಸಿಲಿನ ಬೇಗೆ ತಪ್ಪಿಸಲು ನೆರಳಿನ ಅನುಕೂಲಕ್ಕಾಗಿ ಭಕ್ತರಿಂದಲೇ ಸಸಿಗಳನ್ನು ನೆಡುವ ಮೂಲಕ ದೇವಸ್ಥಾನದಿಂದ ಸಸಿಗಳ ನಿರ್ವಹಣೆ ಮತ್ತು ಪೋಷಣೆ ನೆರವೇರಿಸಿ ವನಸಿರಿ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ದೇವಸ್ಥಾನ ಮತ್ತು ಭಕ್ತರ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ದೇಗುಲದಿಂದ ಪ್ರತಿ ಅಮಾವಾಸ್ಯೆಯಂದು ಭಕ್ತರಿಂದಲೇ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ದೈವಿಕ ಭಕ್ತಿಯ ಜತೆಗೆ ಪರಿಸರ ಅರಾಧನೆಯ ಅಗತ್ಯವಿದೆ. ಮಾಲವಿ ನರ್ಸರಿಯಲ್ಲಿನ ಸುಮಾರು 60 ಗಿಡಗಳನ್ನು ನೆಡಲಾಯಿತು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts