ಬಿ. ಸರೋಜಾದೇವಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸ್ಯಾಂಡಲ್​ವುಡ್​ ತಾರೆಯರು

B Sarojadevi - Final
Published on

ಬೆಂಗಳೂರು: ಹಿರಿಯ ನಟಿ ಬಿ. ಸರೋಜಾದೇವಿ ಅವರಿಗೆ ಗುರುವಾರ (ಜನವರಿ 07) ಹುಟ್ಟುಹಬ್ಬದ ಸಂಭ್ರಮ. 84ಕ್ಕೆ ಕಾಲಿಟ್ಟಿರುವ ಹಿರಿಯ ನಟಿಗೆ ಚಂದನವನದ ಹಲವು ನಟ-ನಟಿಯರು ಶುಭಕೋರಿದ್ದಾರೆ.

ತಮ್ಮ ಹುಟ್ಟುಹಬ್ಬದ ದಿನ ಮನೆಯಲ್ಲಿ ಸತ್ಯನಾರಾಯಣ ಪೂಜೆ ಆಯೋಜಿಸುವುದನ್ನು ಸರೋಜಾದೇವಿ ಅವರು ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದಾರೆ. ಈ ಬಾರಿಯ ಹುಟ್ಟುಹಬ್ಬದಂದೂ ಸತ್ಯನಾರಾಯಣ ಪೂಜೆಯನ್ನು ಆಯೋಜಿಸುವುದರ ಜತೆಗೆ, ಪೂಜೆ ಮತ್ತು ಹುಟ್ಟುಹಬ್ಬಕ್ಕ ಚಿತ್ರರಂಗದ ಹಲವು ಗಣ್ಯರನ್ನು ಆಹ್ವಾನಿಸಿದ್ದಾರೆ.

ಜಯಂತಿ, ಪುನೀತ್​ ರಾಜಕುಮಾರ್​, ಸುಮಲತಾ ಅಂಬರೀಶ್​, ಪ್ರತಿಮಾ ದೇವಿ, ವಿಜಯಲಕ್ಷ್ಮೀ ಸಿಂಗ್​, ರಾಕ್​ಲೈನ್​ ವೆಂಕಟೇಶ್​, ಪ್ರಿಯಾಂಕಾ ಉಪೇಂದ್ರ, ಶ್ರುತಿ, ಮಾಳವಿಕಾ ಅವಿನಾಶ್​, ಸುಧಾರಾಣಿ, ಮಂಗಳಾ ರಾಘವೇಂದ್ರ ರಾಜಕುಮಾರ್​, ಶಿಲ್ಪಾ ಗಣೇಶ್​, ಅಶ್ವಿನಿ ಪುನೀತ್​ ರಾಜಕುಮಾರ್​ ಸೇರಿದಂತೆ ಹಲವರು ಬಿ. ಸರೋಜಾದೇವಿ ಅವರಿಗೆ ಶುಭಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net