

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬರ್ತ್ಡೇ ಪ್ರಯುಕ್ತ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಎಲ್ಲ ಅಂದುಕೊಂಡಿದ್ದರೆ, ಇಂದು ಬೆಳಗ್ಗೆ 10.09 ನಿಮಿಷಕ್ಕೆ ಟೀಸರ್ ಬಿಡುಗಡೆ ಆಗಬೇಕಿತ್ತು. ಆದರೆ, ಯೂಟ್ಯೂಬ್ನಲ್ಲಿ ಸೋರಿಕೆ ಆದ ಬೆನ್ನಲ್ಲೇ ಗುರುವಾರ ರಾತ್ರಿ 9.29 ನಿಮಿಷಕ್ಕೆ ಹೊಂಬಾಳೆ ಫಿಲಂಸ್ ಚಾನೆಲ್ನಲ್ಲಿ ಟೀಸರ್ ಬಿಡುಗಡೆ ಆಗಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ದಾಖಲೆಯ ವೀಕ್ಷಣೆ ಕಂಡ ಕನ್ನಡದ ಮೊದಲ ಟೀಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈಗಾಗಲೇ ಚಿತ್ರತಂಡವೇ ಹೇಳಿಕೊಂಡಂತೆ 30 ಮಿಲಿಯನ್ (3 ಕೋಟಿ) ಮಂದಿ ಕೆಜಿಎಫ್ ಟೀಸರ್ ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ ಟೀಸರ್ ಮೆಚ್ಚಿಕೊಂಡವರ ಸಂಖ್ಯೆಯೂ ಮಿಲಿಯನ್ ಲೆಕ್ಕದಲ್ಲಿಯೇ ಇದೆ ಎಂದರೆ ನೀವು ನಂಬಲೇಬೇಕು. ಹೌದು ಬರೋಬ್ಬರಿ ಮೂರು ಮಿಲಿಯನ್ ಮಂದಿ ಟೀಸರ್ಗೆ ಲೈಕ್ ಒತ್ತಿದ್ದಾರೆ.
ಇದನ್ನೂ ಓದಿ: 230 ಕೋಟಿ ರೂಪಾಯಿಗೆ ಮಾರಾಟವಾದ ರಾಧೆ
ಇತ್ತ ಅಭಿಮಾನಿಗಳ ಸಂಭ್ರಮ ಒಂದೆಡೆಯಾದರೆ, ಬೇರೆ ಬೇರೆ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟರೂ ಚಿತ್ರದ ಟೀಸರ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಟೀಸರ್ ನೋಡಿದ ಬಾಲಿವುಡ್ ನಟ ಹೃತಿಕ್ ರೋಷನ್, ಚಿತ್ರತಂಡದ ಶ್ರಮಕ್ಕೆ ಧನ್ಯವಾದ ಹೇಳಿದ್ದಾರೆ. ವ್ಹಾ.. ಇದೆಂಥಾ ಟ್ರೇಲರ್ .. ಇಡೀ ತಂಡಕ್ಕೆ ಕಂಗ್ರಾಟ್ಸ್... ಹ್ಯಾಪಿ ಬರ್ತ್ಡೇ ಯಶ್ ಶುಭಾಶಯ ತಿಳಿಸಿದ್ದಾರೆ.