

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಈಗಾಗಲೇ ಕನ್ನಡದ ಕಲಾವಿದರು ಸಿಸಿಎಲ್ (ಸೆಲೆಬ್ರಿಟಿ ಕ್ರಿಕೆಟ್ ಲೀಗ್), ಡಾ. ರಾಜ್ ಕಪ್, ಅಪ್ಪು ಕಪ್, ಫ್ಯಾನ್ಸ್ ಕ್ರಿಕೆಟ್ ಲೀಗ್, ಸ್ನೇಹಲೋಕ ಕಪ್, ಬಾಕ್ಸ್ ಕ್ರಿಕೆಟ್ ಲೀಗ್... ಹೀಗೆ ಪ್ರತಿ ವರ್ಷ ಕ್ರಿಕೆಟ್ ಆಡುತ್ತಾರೆ. ಅದರಲ್ಲಿ ಕೆಲವು ಸರಣಿಗಳಲ್ಲಿ ಒಬ್ಬಿಬ್ಬರು ನಟಿಮಣಿಯರೂ ಭಾಗವಹಿಸುತ್ತಾರೆ. ಆದರೆ, ಇದೇ ಮೊದಲ ಬಾರಿಗೆ ಸಂಪೂರ್ಣ ಮಹಿಳೆಯರ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ. ಕ್ರಿಯೇಟಿವ್ ಫ್ರೆಂಡ್ಸ್ ಸಂಸ್ಥೆ ಮೊದಲ ಬಾರಿಗೆ ಕ್ವೀನ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದೆ. ಈ ಟೂರ್ನಮೆಂಟ್ನಲ್ಲಿ ಕಿರುತೆರೆ ಹಾಗೂ ಹಿರಿತೆರೆ ಕಲಾವಿದೆಯರ ಜೊತೆಯಲ್ಲಿ ಆಂಕರ್ಸ್, ಮಾಡೆಲ್ ಗಳು ಸಹ ಭಾಗವಹಿಸಲು ವೇದಿಕೆ ಕಲ್ಪಿಸಿಕೊಡಲಾಗಿದೆ. ಮೇ ತಿಂಗಳಲ್ಲಿ ಅದ್ಧೂರಿಯಾಗಿ QPL ಲೋಗೋ ಬಿಡುಗಡೆ ಕಾರ್ಯಕ್ರಮ ಮಾಡಲಾಗಿತ್ತು. ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಟ್ರೋಫಿ ಹಾಗೂ ಜೆರ್ಸಿ ಅನಾವರಣ ಮಾಡಲಾಯಿತು. ನಟ ಅನಿರುದ್ ಜತ್ಕರ್ ಅವರು ಟ್ರೋಫಿಯನ್ನು ಅನಾವರಣ ಮಾಡಿದರು. ಇದೇ ವೇಳೆ ಹತ್ತು ತಂಡಗಳಿಗೂ ನಾಯಕರ ಆಯ್ಕೆ ಮಾಡಲಾಯಿತು. ಸ್ಯಾಂಡಲ್ ವುಡ್ ಚೆಲುವೆಯರಾದ ಧನ್ಯ ರಾಮ್ ಕುಮಾರ್, ಶೃತಿ ಹರಿಹರನ್, ಭಾವನಾ ರಾವ್, ಸಿರಿ ರವಿಕುಮಾರ್, ಕಾರುಣ್ಯ ರಾಮ್, ಸುಕೃತಾ ವಾಗ್ಲೆ, ಜಾನವಿ ಕಾರ್ತಿಕ್, ಬೃಂದಾ ಆಚಾರ್ಯ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು.
ತಂಡಗಳು ಭಾಗಿ
ಬೆಳಗಾವಿ ಕ್ಲೀನ್ಸ್, ಹುಬ್ಬಳ್ಳಿ ಕ್ಲೀನ್ಸ್, ಬೆಂಗಳೂರು ಕ್ಲೀನ್ಸ್, ಮೈಸೂರು ಕ್ರೀನ್ಸ್, ಕೋಲಾರ್ ಕ್ರೀನ್ಸ್, ಮಂಗಳೂರು ಕ್ಲೀನ್ಸ್, ಶಿವಮೊಗ್ಗ ಕ್ಲೀನ್ಸ್, ಚಿತ್ರದುರ್ಗ ಕ್ರೀನ್ಸ್, ಹಾಸನ ಕ್ಲೀನ್ಸ್ ಮತ್ತು ಬಳ್ಳಾರಿ ಕ್ಲೀನ್ಸ್ ತಂಡಗಳು ಸೇರಿದಂತೆ ಒಟ್ಟು 10 ತಂಡಗಳು ಕ್ವೀನ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ಯಾರ್ ಯಾರು ಕ್ಯಾಪ್ಟನ್
2.ಬೆಂಗಳೂರು ಕ್ವೀನ್ಸ್,
ಮಾಲೀಕರು: ಅರು ಗೌಡ
ನಾಯಕಿ: ಶ್ರುತಿ ಹರಿಹರನ್
ಉಪನಾಯಕಕಿ: ಅಕ್ಷತಾ ರಜತ್
10: ಶಿವಮೊಗ್ಗ ಕ್ವೀನ್ಸ್
ಮಾಲೀಕರು ಮಂಜುನಾಥ್
ನಾಯಕಿ: ಕಾರುಣ್ಯ ರಾಮ್
ಉಪನಾಯಕಿ: ವಾಣಿಶ್ರೀ
ಕ್ವೀನ್ ಪ್ರೀಮಿಯರ್ ಲೀಗ್ ಆಯೋಜಕರ ಬಳಗದಲ್ಲಿ ಮಹೇಶ್ ಕುಮಾರ್, ಪ್ರಮೋದ್ ಶೆಟ್ಟಿ, ಭವ್ಯ ಗೌಡ, ಸಾತ್ವಿಕ್, ಸಂತೋಷ್, ಚೇತನ್, ಸಚಿನ್ ಹಾಗೂ ಪ್ರೇಮ್ ಇದ್ದಾರೆ. ಐದು ಓವರ್‌ಗಳ ಪಂದ್ಯ ಇದಾಗಿದ್ದು, ವಿಜೇತ ತಂಡಕ್ಕೆ 6 ಲಕ್ಷ ನಗದು ಹಾಗೂ ರನ್ನರ್ಸ್ ಅಪ್ ತಂಡಕ್ಕೆ 3 ಲಕ್ಷ ಬಹುಮಾನ ನೀಡಲಾಗುತ್ತದೆ.