ಹೂವಿನ ಉಯ್ಯಾಲೆಯ ಮೇಲೆ ಕುಳಿತ ಅಮೂಲ್ಯ! ಹೊಸ ಫೋಟೋಗಳು ವೈರಲ್...

Published on
ನಟಿ ಅಮೂಲ್ಯ ತಾಯಿಯಾಗುತ್ತಿರುವ ಸಂತೋಷವನ್ನು ಕೆಲ ತಿಂಗಳ ಹಿಂದಷ್ಟೆ ಅಭಿಮಾನಿಗಳಿಗೆ ಹಂಚಿಕೊಂಡಿದ್ದು, ಅದ್ಧೂರಿಯಾಗಿ ಸೀಮಂತ ಕೂಡಾ ಮಾಡಿಕೊಂಡಿದ್ದರು. ಹೌದು, ಮೊದಲು ಅಮೂಲ್ಯಗೆ ಪತಿ ಜಗದೀಶ್ ಅವರ ಕುಟುಂಬಸ್ಥರು ಬಹಳ ಗ್ರ್ಯಾಂಡ್‌ ಆಗಿ ಸೀಮಂತ ಮಾಡಿದ್ದು, ಬಳಿಕ ಇಡೀ ಕನ್ನಡ ಚಿತ್ರರಂಗದ ತಾರೆಯರು ಅವರಿಗೆ ಬೇಬಿ ಶವರ್ ಪಾರ್ಟಿ ಮಾಡಿದ್ದರು. ಈಗಾಗಲೇ, ಮೂರು ಬಾರಿ ನಟಿ ಅಮೂಲ್ಯಾ ಬೇಬಿ ಬಂಪ್ ಫೋಟೋಶೂಟ್​ಗಳನ್ನು ಮಾಡಿಸಿದರು. ಇನ್ನು ಈ ಎಲ್ಲಾ ಸಂದರ್ಭಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆದವು. ಇದೀಗ, ನಟಿ ಅಮೂಲ್ಯ ಮತ್ತೊಂದು ಬೇಬಿ ಬಂಬ್ ಫೋಟೋಶೂಟ್ ಮಾಡಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಹೌದು, ಅಮೂಲ್ಯ ಪತಿ ಜಗದೀಶ್ ಜೊತೆ ಮತ್ತೊಂದು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಬಾರಿಯ ಫೋಟೋಶೂಟ್‌ನಲ್ಲಿ ಅಮೂಲ್ಯ ನೀಲಿ ಬಣ್ಣದ ಲಾಂಗ್ ಗೌನ್ ಧರಿಸಿ, ನೀರಿನ ನಡುವೆ ಹೂವಿನ ಉಯ್ಯಾಲೆಯ ಮೇಲೆ ಕುಳಿತು ಫೋಟೋಗಳಿಗೆ ಪೋಸ್ ಕೊಟ್ಟಿದ್ದು, ಸದ್ಯ ಈ ಬೇಬಿಬಂಪ್ ಫೋಟೋಗಳು ವೈರಲ್ ಆಗುತ್ತಿವೆ. ಎಲ್ಲಾ ಫೋಟೋಗಳು ಬಹಳ ಸುಂದರವಾಗಿ ಮೂಡಿಬಂದಿವೆ. ನಟಿಯ ಈ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾವಿರ ಸಾವಿರ ಕಾಮೆಂಟ್​ಗಳು ಮತ್ತು ಲೈಕ್ಸ್ ಗಿಟ್ಟಿಸಿಕೊಂಡಿವೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net