ಪೋಷಕ ನಟ ರಾಕ್​ಲೈನ್​ ಸುಧಾಕರ್​ ನಿಧನ

Rock
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ಪೋಷಕ ನಟ ರಾಕ್​ಲೈನ್​ ಸುಧಾಕರ್​ ಹೃದಯಾಘಾತದಿಂದ ಗುರುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಸ್ಯಾಂಡಲ್​ವುಡ್​ ಚಿತ್ರೋದ್ಯಮ ಸಂತಾಪ ಸೂಚಿಸಿದೆ. ಇಂದು ಬೆಳಿಗ್ಗೆ ಶುಗರ್​ಲೆಸ್​ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ, ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿದ್ದ ರಾಕ್​ಲೈನ್​ ಸುಧಾಕರ್​, ಹಾಸ್ಯಕಲಾವಿದರಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಪಂಚರಂಗಿ, ಪರಮಾತ್ಮ, ಟೋಪಿವಾಲಾ, ಅಧ್ಯಕ್ಷ, ಲವ್​ ಇನ್​ ಮಂಡ್ಯ, ಮಿಸ್ಟರ್​ ಆ್ಯಂಡ್​ ಮಿಸೆಸ್​ ರಾಮಾಚಾರಿ, ವಾಸ್ತುಪ್ರಕಾರ, ಕರ್ವ, ಜೂಮ್​ ಸೇರಿ 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net