VIDEO: ಶಿವಣ್ಣ ಬರ್ತ್​ಡೇಗೆ ಸಂಯುಕ್ತಾ ಹೆಗ್ಡೆ ಡಿಫರೆಂಟ್​ ವಿಶ್​ ಹೇಗಿದೆ ನೋಡಿ...

samyuktha-hegde_156446034520
Published on

ನಟಿ ಸಂಯುಕ್ತಾ ಹೆಗ್ಡೆ ಸೋಷಿಯಲ್ ಮೀಡಿಯಾ ಖಾತೆಯನ್ನೊಮ್ಮೆ ತೆರೆದು ನೋಡಿದರೆ ಅಲ್ಲಿ ಅವರ ಬಗೆಬಗೆಯ ವರ್ಕೌಟ್ ಫೋಟೋಗಳು, ವಿಡಿಯೋಗಳೇ ಕಾಣಿಸುತ್ತವೆ. ಜಿಮ್ನಾಸ್ಟಿಕ್​ ರೀತಿಯಲ್ಲಿಯೇ ಹಲವು ಸಾಹಸಗಳನ್ನು ಸಂಯುಕ್ತಾ ಲೀಲಾಜಾಲವಾಗಿ ಮಾಡುತ್ತಾರೆ. ಬಳ್ಳಿಯಂತೆ ದೇಹವನ್ನು ಬೆಂಡಾಗಿಸುತ್ತಾರೆ. ಹೀಗಿರುವಾಗ ನೆಚ್ಚಿನ ನಟ, ನಟಿಯರ ಬರ್ತ್​ಡೇಗೆ ವರ್ಕೌಟ್​ ಮೂಲಕವೇ ಶುಭಾಶಯ ಕೋರುತ್ತಿದ್ದಾರೆ ಸಂಯುಕ್ತಾ. ಇತ್ತೀಚೆಗೆ ವಿಜಯ್​ ಜನ್ಮದಿನಕ್ಕೆ ಮಾಸ್ಟರ್ ಚಿತ್ರದ ವಾತಿ ಕಮಿಂಗ್ಸ್​ ಸ್ಟೆಪ್ಸ್​ ಅನ್ನು ರಿಂಗ್​ನಲ್ಲಿ ಮಾಡಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದರು. ಇದೀಗ ಶಿವಣ್ಣ ಜನ್ಮ ದಿನದ ಪ್ರಯುಕ್ತ ಟಗರು ಬಂತು ಟಗರು ಹಾಡಿಗೆ ಕುಣಿದಿದ್ದಾರೆ. ಕೈಯಲ್ಲಿ ರಿಂಗ್​ ಹಿಡಿದು ಅವರು ಹಾಕಿದ ಸ್ಟೆಪ್ಸ್​ ವಿಡಿಯೋ ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net