ಅಂದಹಾಗೆ, ನಾಗಚೈತನ್ಯ ಅವರು ಮಾ. 21 ರಂದು ಇನ್ಸ್ಟಾಗ್ರಾಂನಲ್ಲಿ 7 ಮಿಲಿಯನ್ ಅನುಯಾಯಿಗಳನ್ನು ಗಳಿಸಿದ್ದರು. ಅದರ ನಂತರವೇ, ನಟಿ ಸಮಂತಾ ಮಾಜಿ ಪತಿಯನ್ನು ಅನ್ಫಾಲೋ ಮಾಡಿದ್ದಾರೆ ಎನ್ನಲಾಗಿದೆ. ಇನ್ನು, ಕೆಲ ಸಮಯದ ಹಿಂದೆ ನಟಿ ಸಮಂತಾ ಅವರು ನಾಗಚೈತನ್ಯರೊಂದಿಗಿದ್ದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಿಂದ ಡಿಲೀಟ್ ಮಾಡಿದ್ದರು. ಇದೀಗ, ಅನ್ಫಾಲೋ ಮಾಡಿದ್ದಾರೆ.