2021ರಲ್ಲಿ ಬಾಲಿವುಡ್, ಟಾಲಿವುಡ್, ಕಾಲಿವುಡ್ ಅಂತ ಎಲ್ಲಿ ನೋಡಿದರೂ ಬರೀ ನಟಿ ಸಮಂತಾಳ ಬಗ್ಗೆಯೇ ಚರ್ಚೆಗಳು ಕೇಳಿಬಂದವು. ಸಮಂತಾ ಅವರ ವಿಚ್ಛೇದನ ವಿಷಯವಾಗಿ ಸಾಕಷ್ಟು ಟೀಕೆ ಟಿಪ್ಪಣಿಗಳಿಗೆ ಗುರಿಯಾಗಿದ್ದು ಬಹಳಷ್ಟು ಬೇಸರ ಗೊಂಡಿದ್ದರು. ಆದರೂ, ತಮ್ಮ ನೋವಿನಿಂದ ಹೊರಬಂದು ನಂತರ ''ಪುಷ್ಪ'' ಸಿನಿಮಾದಲ್ಲಿ ಮೊದಲ ಬಾರಿಗೆ ಐಟಂ ಹಾಡಿಗೆ ಹೆಜ್ಜೆ ಹಾಕಿ ಕೂಡ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದರು. ಸಮಂತಾಳ ಐಟಂ ಹಾಡಿನ ಬೋಲ್ಡ್ ಲುಕ್ ಮತ್ತು ಆ ಹಾಡಿನ ಸಾಹಿತ್ಯದಿಂದಲೂ ವಿವಾದಕ್ಕೆ ಸಿಲುಕಿದ್ದರು. ನಂತರ, 20 ದಿನ ಜ್ವರದಿಂದ ಬಳಲಿ ಈಗ ಚೇತರಿಸಿಕೊಂಡಿದ್ದಾರೆ. ಇದೇ ಕಾರಣಗಳಿಗೆ ಸಮಂತಾ ಬದುಕಿನಲ್ಲಿ 2021 ವರ್ಷವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದೇ ಹೇಳಬೇಕು. ಆದರೆ, ಇಷ್ಟೆಲ್ಲಾ ನಡೆದ ನಂತರವೂ ಧೃತಿಗೆಡದೆ ನಟಿ ಸಮಂತಾ 2022ರನ್ನು ಎದುರಿಸಲು ರೆಡಿಯಾಗಿದ್ದಾರೆ.