ಸ್ವಿಜರ್​ಲೆಂಡ್​ನಲ್ಲಿ ಸಮಂತಾ ಧರಿಸಿದ ಜಾಕೆಟ್​ಗಳ ಬೆಲೆ ಎಷ್ಟು ಗೊತ್ತಾ?

Published on
ಸೆಲೆಬ್ರಿಟಿಗಳು ಕೋಟಿ ಕೋಟಿ ಸಂಭಾವನೆ ಪಡೆಯುವ ಹಾಂಗೆ ಅವರು ಖರಿದಿಸೋ ವಸ್ತುಗಳು ಕೂಡ ತುಂಬಾನೆ ಬೆಲೆ ಬಾಳುತ್ತವೆ. ಅದರಲ್ಲಿಯೂ, ಸಿನಿತಾರೆಯರು ಧರಿಸುವ ಉಡುಪುಗಳು, ಬ್ಯಾಗ್​ಗಳು ಮತ್ತು ಕೆಲವೊಮ್ಮೆ ಅವರು ಹಾಕುವ ಚಪ್ಪಲಿಯ ಫೋಟೋಗಳು ವೈರಲ್​ ಆಗುತ್ತವೆ. ಇದಕ್ಕೆ, ಕಾರಣ ಬಹುತೇಕ ಆ ವಸ್ತುಗಳ ಬೆಲೆಯಾಗಿರುತ್ತೆ. ಇತ್ತೇಚೆಗೆ, ನಟಿ ಕತ್ರನಾ ತಾವು ತೊಟ್ಟ ಪೈಜಾಮಾದ ಬೆಲೆಗೆ ಸುದ್ದಿಯಾದರೆ, ಇದೀಗ ನಟಿ ಸಮಂತಾ ಕೂಡ ಇಂತಹದ್ದೇ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.
ತಮ್ಮ ವಿಚ್ಛೇದನದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯೂಸಿಯಾಗಿರುವ ಸಮಂತಾ, ಈಗ ಒಂದಿಷ್ಟು ಬಿಡುವು ಮಾಡಿಕೊಂಡ ದೇಶ-ವಿದೇಶ ಅಂತ ಟ್ರಿಪ್ ಹೊಡೆಯುತ್ತಿದ್ದಾರೆ. ಇನ್ನು, ಸ್ಯಾಮ್ ಸದ್ಯ ಸ್ವಿಜರ್​ಲೆಂಡ್​ ದೇಶದಲ್ಲಿದ್ದಾರೆ. ಅಲ್ಲಿ ಹಾಯಾಗಿ ಕಾಲಕಳೆಯುತ್ತಾ, ಸ್ಯಾಮ್ ಸಿಕ್ಕಾಪಟ್ಟೆ ಎಂಜಾಯ್​ ಮಾಡುತ್ತಿದ್ದಾರೆ. ಆ ಬರಿ ಹಿಮ ತುಂಬಿರುವ ದೇಶದಲ್ಲಿ ಸ್ಯಾಮ್ ಸ್ಕೀಯಿಂಗ್ ಕಲಿತು ಪ್ರತಿದಿನ ಮಾಡುತ್ತಿದ್ದಾರೆ. ಬೇರೆ ಬೇರೆ ರೀತಿಯ ಹಲವು ಚಟುವಟಿಕೆಗಳಲ್ಲೂ ಸಮಂತಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇನ್ನು, ಈ ದೇಶದಲ್ಲಿ ಚಳಿಗೆ ತಡೆದುಕೊಂಡು ಬದುಕಲು ಸ್ಯಾಮ್ ಎರಡು ದುಬಾರಿ ಜಾಕೆಟ್​ಗಳನ್ನು ಖರೀದಿಸಿದ್ದಾರೆ. ಹೌದು, ನಟಿ ಸಮಂತಾ ಮೊದಲು 'ಟೋನಿ ಸೈಲರ್' ಬ್ರ್ಯಾಂಡ್​ನ ಹಳದಿ ಬಣ್ಣದ ಜಾಕೆಟ್​ ಅನ್ನು ಖರೀದಿಸಿದರು. ಅದರ ಬೆಲೆ ಬರೋಬ್ಬರಿ 75 ಸಾವಿರ ರೂ. ಅಂತೆ. ನಂತರ, ನಟಿ ಸಮಂತಾ ಒಂದು ಬ್ಲ್ಯಾಕ್​ ಜಾಕೆಟ್​ನಲ್ಲಿಯೂ ಕಾಣಿಸಿಕೊಂಡಿದ್ದರು. ಇದು, 'ಮಾಂಕ್ಲರ್' ಬ್ರ್ಯಾಂಡ್​ನ ಜಾಕೆಟ್​ ಎನ್ನಲಾಗಿದ್ದು, ಬೆಲೆ 1.20 ಲಕ್ಷ ರೂ. ಎಂಬ ಮಾಹಿತಿ ಇದೆ. ಈ ಜ್ಯಾಕೆಟ್​ಗಳ ಬೆಲೆ ಕೇಳಿದ ನೆಟ್ಟಿಗರು ಸಖತ್ ಶಾಕ್ ಆಗಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net