ಹೌದು, ತಮ್ಮ ಎನ್ಜಿಒ ಆದ ಪ್ರತ್ಯೂಷಾ ಮೂಲಕ ನಟಿ ಸಮಂತಾ ತಾವು ಸಮಾಜಕ್ಕೆ ಮಾಡುತ್ತಿರುವ ನಿಸ್ವಾರ್ಥ ಸೇವೆ ಮತ್ತು ಸಾಮಾಜಿಕ ಅಭಿವೃದ್ಧಿ ಕುರಿತು ಅವರ ಪ್ರಯತ್ನಗಳಿಗೆ ಈ ಪ್ರಶಸ್ತಿಯನ್ನು ನಟಿ ಮುಡಿಗೇರಿಸಿಕೊಂಡಿದ್ದಾರೆ. "ಚಾಂಪಿಯನ್ಸ್ ಆಫ್ ಚೇಂಜ್ ತೆಲಂಗಾಣ 2021' ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ. @pratyushasupportorg ಮೂಲಕ ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ನನ್ನ ಕೆಲಸವನ್ನು ಈ ಪ್ರಶಸ್ತಿ ಗುರುತಿಸಿದೆ'', ಎಂಬ ಕ್ಯಾಪ್ಷನ್ ಅನ್ನು ತಮ್ಮ ಪೋಸ್ಟ್ಗೆ ನೀಡಿದ್ದಾರೆ ಸ್ಯಾಮ್. ನಟಿ ಈ ಪೋಸ್ಟ್ ಅನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 1.2 ಮಿಲಿಯನ್ ಲೈಕ್ಸ್, 3,500 ಕಾಮೆಂಟ್ಗಳು ಬಂದಿವೆ.