ಮೈ ತುಂಬಾ ಬಟ್ಟೆ ಹಾಕಿದ ಉರ್ಫಿ! ಭೇಷ್ ಎಂದ ವಿಮರ್ಶಕರು, ಹಸಿರು ಚೂಡಿದಾರ್ ವಿಡಿಯೋ ವೈರಲ್...

Published on
ಹಿಂದಿ ಬಿಗ್ ಬಾಸ್ OTT ಖ್ಯಾತಿಯ, ನಟಿ ಉರ್ಫಿ ಜಾವೇದ್ ತಮ್ಮ ವಿಚಿತ್ರ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿ ಎಂದರೇ ತಪ್ಪಾಗುವುದಿಲ್ಲ. ಉರ್ಫಿ ಜಾವೇದ್ ತಮ್ಮ ಹೊಸ ಹೊಸ ಪ್ರಯೋಗಿತ ಉಡುಪುಗಳು ಮತ್ತು ಹೆಚ್ಚು ಮೈ ತೋರಿಸುವ ಉಡುಪುಗಳನ್ನು ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಹುಬ್ಬೇರಿಸುತ್ತಾರೆ. ಇದೇ, ಕಾರಣಕ್ಕೆ ಅವರು ಆಗಾಗ್ಗ ಟ್ರೋಲ್​ಗಳಿಗೆ ತುತ್ತಾಗುತ್ತಾರೆ. ಆದರೆ, ಈ ಬಾರಿ ಟ್ರೋಲ್ ಆಗದೆ, ತಾವು ತೊಟ್ಟ ಒಂದು ಉಡುಪಿನಿಂದ ಉರ್ಫಿ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾರೆ.
ಹೌದು, ಈ ಬಾರಿ, ಉರ್ಫಿ ಅವರ ಅಭಿಮಾನಿಗಳ ಹೃದಯವನ್ನು ಕದಿಯುವುದಲ್ಲದೇ ಅವರ ವಿಮರ್ಶಕರ ಮನಸ್ಸನ್ನು ಗೆದ್ದಿದ್ದಾರೆ. ಶನಿವಾರ ದಂದು, ನಟಿ ಉರ್ಫಿ ಅವರು ಒಂದು ಹಸಿರು ಸಲ್ವಾರ್ ಕಮೀಜ್‌ (ಚೂಡಿದಾರ್) ತೊಟ್ಟು, ಹೆಚ್ಚು ಮೈ ತೋರಿಸದೆ ಸಾಂಪ್ರದಾಯಿಕವಾಗಿ ಹಾಗೂ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಜತೆಗೆ, ಚೂಡಿದಾರ್​ನಲ್ಲಿ ಅವರು ಕಾಣಿಸಿಕೊಂಡ ಒಂದು ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ.
ಅಷ್ಟೇ! ನಟಿಯ ಅಭಿಮಾನಿಗಳು ಅವರನ್ನು ಹೀಗೆ ಕಂಡು ದಿಲ್ ಖುಷ್ ಆಗಿದ್ದು, ಸೂಪರ್ ಎಂದು ಕಾಮೆಂಟ್​ಗಳ ಸುರಿ ಮಳೆಯನ್ನೇ ಸುರಿಸಿದ್ದಾರೆ. ಮತ್ತೊಂದೆಡೆ, ಟ್ರೋಲಿಗರು, ನಟಿಯನ್ನು ಸದಾ ವಿಮರ್ಶೆ ಮಾಡುವವರು, ಈಗ ಉರ್ಫಿ ಹುಡುಗಿಯಂತೆ ಕಾಣುತ್ತಿದ್ದು, ಇದನ್ನು ಮುಂದುವರಿಸಿದರೆ ತುಂಬಾ ಚೆನ್ನಾಗಿರುತ್ತೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ನಟಿಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, 40,000 ಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 1500 ಕಾಮೆಂಟ್​ಗಳು ಇವೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net