ಒಂದೇ ಮದುವೆ ಸಮಾರಂಭದಲ್ಲಿ ಮುಖಾಮುಖಿಯಾದರೇ Samantha And Naga Chaitanya?; ಬಾಳಸಂಗಾತಿ ಜೊತೆ ಕಾಣಿಸಿಕೊಂಡ ವಿಡಿಯೋ ವೈರಲ್!

Samantha-Naga Chaitanya
Samantha-Naga Chaitanya
Published on

ಪ್ರಮುಖ ಮುಖ್ಯಾಂಶಗಳು

  • ಹೈದರಾಬಾದ್‌ನ ಜಿ.ವಿಕೆ ಕುಟುಂಬದ ಮದುವೆಯಲ್ಲಿ ಕಾಣಿಸಿಕೊಂಡ ನಾಗಚೈತನ್ಯ -ಸಮಂತಾ
  • ನಿರ್ದೇಶಕ ರಾಜ್ ನಿಡಿಮೋರು ಜೊತೆಗೆ ಮದುವೆಗೆ ಆಗಮಿಸಿ ನವದಂಪತಿಗೆ ಹಾರೈಸಿದ ಜೋಡಿ
  • ವಿಚ್ಛೇದನದ ನಂತರ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಸ್ಯಾಮ್-ಚೈತು
ಹೈದರಾಬಾದ್: ಹೈದರಾಬಾದ್‌ನಲ್ಲಿ ಟಾಲಿವುಡ್‌ನ ಖ್ಯಾತ ವಿತರಕ ಮತ್ತು ನಿರ್ಮಾಪಕ ಸುನಿಲ್ ನಾರಂಗ್ ಅವರ ಪುತ್ರಿ ಸಿಮ್ರಾನ್ ನಾರಂಗ್ ಅವರ ಅದ್ಧೂರಿ ವಿವಾಹ ಸಮಾರಂಭದಲ್ಲಿ ಮಾಜಿ ದಂಪತಿ ನಟ ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು(Samantha-Naga Chaitanya) ಕಾಣಿಸಿಕೊಂಡಿದ್ದಾರೆ.
ಶನಿವಾರ ಹೈದರಾಬಾದ್‌ನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಚಿರಂಜೀವಿ ಮತ್ತು ನಾಗಾರ್ಜುನ ಸೇರಿದಂತೆ ಅನೇಕ ಪ್ರಸಿದ್ಧ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾಜಿ ದಂಪತಿ ನಾಗ ಮತ್ತು ಸಮಂತಾ ಕೂಡ ತಮ್ಮ ಸಂಗಾತಿಗಳೊಂದಿಗೆ ಆರತಕ್ಷತೆ ಕಾರ್ಯಕ್ರಮದಲ್ಲಿ ಒಂದೇ ಸಮಯದಲ್ಲಿ ಕಾಣಿಸಿಕೊಂಡರು. ವಿಚ್ಛೇದನದ ನಂತರ ಇದೇ ಮೊದಲ ಬಾರಿಗೆ ಒಂದೇ ಸಮಾರಂಭದಲ್ಲಿ ತಮ್ಮ ಹೊಸ ಬಾಳಸಂಗಾತಿಗಳೊಂದಿಗೆ ಕಾಣಿಸಿಕೊಂಡಿರುವ ವಿಡಿಯೋಗಳು ಸದ್ಯ ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?

ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ, ಸಮಂತಾ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದನ್ನು ಕಾಣಬಹುದು. ರಾಜ್ ಅವರ ಕೈ ಹಿಡಿದುಕೊಂಡು ಒಳಗೆ ಹೋಗುವಾಗ ಅವರು ನಗುವನ್ನು ತಡೆಯಲಾಗಲಿಲ್ಲ. ಪತಿಯನ್ನು ಭದ್ರತಾ ಸಿಬ್ಬಂದಿಗೆ ಡಿಕ್ಕಿ ಹೊಡೆಯದಂತೆ ರಕ್ಷಿಸುತ್ತಿರುವುದನ್ನು ಕಾಣಬಹುದು.

ಮತ್ತೊಂದು ಕ್ಲಿಪ್‌ನಲ್ಲಿ ಚೈತನ್ಯ ಮತ್ತು ಶೋಭಿತಾ ನಾಗಾರ್ಜುನ ಅವರೊಂದಿಗೆ ಪ್ರವೇಶಿಸುತ್ತಿರುವುದನ್ನು ತೋರಿಸಲಾಗಿದೆ. ವಧು-ವರರನ್ನು ಅಭಿನಂದಿಸಲು ಒಳಗೆ ಹೋಗುವ ಮೊದಲು ಅವರು ಪಾಪರಾಜಿಗೆ ಪೋಸ್ ನೀಡಿದರು.

ಶೋಭಿತಾ ಧೂಳಿಪಾಲ ಜೊತೆ ನಾಗ ಚೈತನ್ಯ

ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಾಗ ಚೈತನ್ಯ, ಮದುವೆ ಸಮಾರಂಭಕ್ಕೆ ಶೋಭಿತಾ ಅವರೊಂದಿಗೆ ಆಗಮಿಸಿದ್ದರು. ನಾಗ ಚೈತನ್ಯ ಅವರು ನೀಲಿ ಬಣ್ಣದ ಬ್ಲೇಜರ್ ಧರಿಸಿದ್ದರೆ, ಶೋಭಿತಾ ಅವರು ನೀಲಿ ಮತ್ತು ಗುಲಾಬಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡರು. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಈ ಜೋಡಿ ಕ್ಯಾಮೆರಾ ಕಣ್ಣುಗಳಿಗೆ ಪೋಸ್ ಕೊಟ್ಟು ಎಕ್ಸಿಟ್ ಆದರು.

ರಾಜ್ ನಿಡಿಮೋರು ಜೊತೆ ಸಮಂತಾ

ಸಮಂತಾ ಮತ್ತು ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಇಬ್ಬರು ಜಿ.ವಿಕೆ ಕೃಷ್ಣಾರೆಡ್ಡಿ ಅವರ ಮೊಮ್ಮಗನ ಮದುವೆಗೆ ಆಗಮಿಸಿದ್ದರು. ನೇರಳೆ ಮತ್ತು ಚಿನ್ನದ ಬಣ್ಣದ ರೇಷ್ಮೆ ಸೀರೆಯಲ್ಲಿ ಅತ್ಯಂತ ಸುಂದರವಾಗಿ ಕಾಣುತ್ತಿದ್ದರು. ಪತಿ ರಾಜ್ ನಿಡಿಮೋರು ಅವರು ಸೂಟ್‌ನಲ್ಲಿದ್ದರು. ಈ ಸಮಾರಂಭದಲ್ಲಿ ಸಮಂತಾ ಮತ್ತು ನಾಗ ಚೈತನ್ಯ ಮುಖಾಮುಖಿಯಾದರೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದ್ದರೂ, ಇಬ್ಬರೂ ಪರಸ್ಪರ ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿದೆ.

ಮದುವೆ ಸಂಬಂಧ

ನಟ ನಾಗ ಚೈತನ್ಯ ಮತ್ತು ಸಮಂತಾ ಅವರು 2010ರ ಯೇ ಮಾಯಾ ಚೆಸಾವೆ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ಆನಂತರ ಇಬ್ಬರ ಮಧ್ಯೆ ಪ್ರೀತಿ ಮೊಳಗಿತ್ತು ಎನ್ನಲಾಗಿದೆ. ಅಕ್ಟೋಬರ್ 2017 ರಲ್ಲಿ ಗೋವಾದಲ್ಲಿ ವಿವಾಹವಾದರು.2021 ರಲ್ಲಿ ವಿಚ್ಛೇದನವನ್ನು ಘೋಷಿಸಿದರು. 2024ರಲ್ಲಿ ನಾಗ ಚೈತನ್ಯ ಅವರು ಶೋಭಿತಾ ಧೂಳಿಪಾಲ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net