ಇಂದು ಮಧ್ಯಾಹ್ನ ನಟಿ ಸಮಂತಾ ರುತ್ ಪ್ರಭು ಆಂಧ್ರದ ನಲ್ಗೊಂಡದಲ್ಲಿ 'ಮಾಂಗಲ್ಯಾ' ಎಂಬ ಒಂದು ಸ್ಟೋರ್ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಹಾಗಾಗಿ, ನಟಿಯನ್ನು ನೋಡಲು ಈ ಈವೆಂಟ್ನಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ನೆರೆದಿದ್ದು, ಲೇನ್‌ಗಳಲ್ಲಿ ಕಿಕ್ಕಿರಿದು ಕಾಯುತ್ತಿದ್ದರು. ಅಂದಹಾಗೆ, ಈ ಸಂದರ್ಭದಲ್ಲಿ ಗುಲಾಬಿ ಬಣ್ಣದ ಸೀರೆಯಲ್ಲಿ ನಟಿ ಸಮಂತಾ ಎಲ್ಲರ ಗಮನ ಸೆಳೆದರು. ಜತೆಗೆ, ಕಾರಿನ ಸನ್‌ರೂಫ್ ಮೂಲಕ ಕಾರ್ಯಕ್ರಮಕ್ಕೆ ಹೋಗುವಾಗ ದಾರಿಯಲ್ಲಿ ನಟಿ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಕೈ ಬೀಸಿದರು.