ನಟಿ ಸಮಂತಾ ಮತ್ತು ನಾಗಚೈತನ್ಯ ಇಬ್ಬರು ಪ್ರೀತಿಸಿ 2017ರಲ್ಲಿ ಮದುವೆ ಆಗಿದ್ದರು. ಆದರೆ, ಯಶಸ್ವಿ ದಾಂಪತ್ಯ ನಡೆಸುವಲ್ಲಿ ಈ ಜೋಡಿ ವಿಫಲ ಆಗಿದೆ. 11 ವರ್ಷದ ಪ್ರೀತಿಗೆ ಮದುವೆ ಆದ ನಾಲ್ಕೇ ವರ್ಷದಲ್ಲಿ, ಅಕ್ಟೋಬರ್ 2 2021 ರಂದು ಅಂತ್ಯ ಹಾಡಿದ್ದಾರೆ. ಸದ್ಯ, ಸಮಂತಾ ಮತ್ತು ನಾಗಚೈತನ್ಯ ಅವರು ವಿಚ್ಛೇದನ ಪಡೆದು ದೂರಾಗಿರುವು ಸುದ್ದಿಯೇ ಎಲ್ಲೆಡೆ ಚರ್ಚೆಗೆ ಗ್ರಾಸವಾಗುತ್ತಿದೆ. ಕಳೆದ ವರ್ಷದಿಂದ ಈ ವರ್ಷವು 2022 ರಲ್ಲಿಯೂ ಇವರಿಬ್ಬರ ವಿಚ್ಛೇದನದ ಸುದ್ದಿಯದ್ದೆ ಸದ್ದು. ಹಲವು ವಿಚಾರಗಳ ಕುರಿತು ನಟಿ ಸಮಂತಾ ವಿಚ್ಛೇದನದ ಬಳಿಕ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಲೆ ಇದ್ದಾರೆ. ಇದೀಗ ಮತ್ತೆ ಸಮಂತಾ ಹಳೆ ವಿಚಾರವೊಂದಕ್ಕೆ, ಹೊಸ ರೀತಿಯಲ್ಲಿ ಟ್ರೋಲ್ ಆಗುತ್ತಿದ್ದಾರೆ. 2013ರಲ್ಲಿ ನಟಿ ಸಮಂತಾ ಆಡಿದ ಮಾತು, ಇಂದು ನಿಜವಾಗಿ ಬಿಟ್ಟಿದೆಯಂತೆ. ಹೌದು, ವಿಚ್ಛೇದನದ ಬಗ್ಗೆ ಮದುವೆಗೂ ಮುನ್ನ ಸಮಂತಾ ನೀಡಿದ್ದ ಹೇಳಿಕೆಯೊಂದು ಈಗ ನಿಜವಾಯಿತೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಳೆ ಸುದ್ದಿಯೊಂದು ಈಗ ವೈರಲ್ ಆಗುತ್ತಿದೆ.