ಬೀದಿಗೆ ಬಂದ ಸಲ್ಮಾನ್ ಖಾನ್, ಕೋವಿಡ್ ವಾರಿಯರ್ಸ್​ಗೆ ನೆರವಿನ ಹಸ್ತ

Salman Khan
Published on

ಕಳೆದ ವರ್ಷದ ಲಾಕ್​ಡೌನ್ ವೇಳೆಗೆ ಮುಂಬೈ ಹೊರವಲಯದ ತಮ್ಮ ಪನ್ವೇಲ್ ತೋಟದ ಮನೆಯಲ್ಲಿಯೇ ಇಬ್ಬರು ಗೆಳತಿಯರು ಮತ್ತು ಕುಟುಂಬದೊಂದಿಗೆ ಕಾಲ ಕಳೆದಿದ್ದ ಸಲ್ಮಾನ್ ಖಾನ್, ಇದೀಗ ಎರಡನೇ ಅಲೆ ಹಾವಳಿಯ ಸಮಯದಲ್ಲಿ ಬೀದಿಗಿಳಿದಿದ್ದಾರೆ. ಮಹಾರಾಷ್ಟ್ರದಲ್ಲಿ ಕರೊನಾ ಕೈ ಮೀರಿದೆ. ಇಂಥ ವಿಷಮ ಸಂದರ್ಭದಲ್ಲಿ ಇನ್ನುಳಿದ ಸ್ಟಾರ್ ನಟರು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಆದರೆ, ಸಲ್ಮಾನ್ ಖಾನ್ ಮಾತ್ರ ಕೋವಿಡ್ ವಾರಿಯರ್​ಗಳ ಸಹಾಯಕ್ಕೆ ಧಾವಿಸಿದ್ದಾರೆ.

ಮುಂಬೈನ ಪೊಲೀಸರು, ಬೃಹನ್ಮುಂಬೈ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಪೌರಕಾರ್ವಿುಕರಿಗೆ 5 ಸಾವಿರ ಆಹಾರದ ಪ್ಯಾಕೇಟ್​ಗಳನ್ನು ವಿತರಣೆ ಮಾಡಿದ್ದಾರೆ. ಬಿಸಿಲಿನ ತಾಪಕ್ಕೆ ನೀರಿನ ಬಾಟಲಿಗಳನ್ನೂ ನೀಡಿದ್ದು, ಆಹಾರವನ್ನು ಸ್ವತಃ ತಾವೇ ಸೇವಿಸಿ ಪರೀಕ್ಷೆ ಮಾಡಿದ್ದಾರೆ. ಹಾಗೇ ಆಹಾರ ಸೇವನೆಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಲ್ಮಾನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂದಹಾಗೆ, ಸೋಮವಾರ ಸಲ್ಮಾನ್ ಅಭಿನಯದ ‘ರಾಧೆ; ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರದ ‘ಸೀಟಿ ಮಾರ್ ...’ ಹಾಡು ಬಿಡುಗಡೆಯಾಗಿದ್ದು, ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದೆ. ಪ್ರಭುದೇವಾ ನಿರ್ದೇಶನದ ಈ ಸಿನಿಮಾ, ಮೇ. 13ರಂದು ಜೀ ಪ್ಲೆಕ್ಸ್ ಓಟಿಟಿ ವೇದಿಕೆಯಲ್ಲಿ ಬಿಡುಗಡೆ ಆಗಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net