ಎರಡು ತಿಂಗಳ ನಂತರ ಸಲ್ಮಾನ್ ಮಾಡಿದ್ದೇನು?

Salman Khan with Father Final
Published on

ಲಾಕ್‌ಡ್‌ನ್ ಸಂದರ್ಭದಲ್ಲಿ ತಮ್ಮ ಗೆಳತಿಯರ ಜತೆಗೆ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿದ್ದ ಸಲ್ಮಾನ್ ಖಾನ್, ಎರಡು ತಿಂಗಳ ನಂತರ ಸದ್ದಿಲ್ಲದೆ ಒಂದು ಕೆಲಸ ಮಾಡಿದ್ದಾರೆ. ಈ ವಿಷಯವನ್ನು ಸಾಧ್ಯವಾದಷ್ಟೂ ಗೌಪ್ಯವಾಗಿಟ್ಟಿದ್ದ ಅವರು, ಕೆಲಸ ಮುಗಿದ ನಂತರ ಜಗಜ್ಜಾಹೀರು ಮಾಡಿದ್ದಾರೆ.

ಇಷ್ಟಕ್ಕೂ ಸಲ್ಮಾನ್ ಅಂಥದ್ದೇನು ಮಾಡಿದರು ಎಂಬ ಪ್ರಶ್ನೆ ಕೆಲವರಿಗಾದರೂ ಬರಬಹುದು. ಲಾಕ್‌ಡೌನ್ ಸ್ವಲ್ಪ ಸಡಿಲವಾಗುತ್ತಿದ್ದಂತೆಯೇ, ಸೀದಾ ಮುಂಬೈಗೆ ಹೋಗಿ ತಮ್ಮ ತಂದೆ-ತಾಯಿಯನ್ನು ಭೇಟಿಯಾಗಿ ವಾಪಸ್ಸಾಗಿದ್ದಾರೆ.

ಲಾಕ್‌ಡೌನ್ ಪ್ರಾರಂಭವಾಗುವುದಕ್ಕಿಂತ ಮುನ್ನ ಸಲ್ಮಾನ್ ತಮ್ಮ ಗೆಳತಿಯರಾದ ಜಾಕ್ವಿಲಿನ್ ರ್ನಾಂಡಿಸ್, ವಾಲುಶ್ಚಾ ಡಿಸೋಜಾ, ಯೂಲಿಯಾ ವಂಚರ್, ತಂಗಿ ಅರ್ಪಿತಾ ಖಾನ್, ಬಾವ ಆಯುಷ್ ಶರ್ಮಾ ಮುಂತಾದವರ ಜತೆಗೆ ಪನ್ವೇಲ್‌ನ ಫಾರ್ಮ್ ಹೌಸ್‌ಗೆ ಹೋಗಿದ್ದರು. ಈ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆಯಾದ್ದರಿಂದ, ಅವರು ಅಲ್ಲೇ ಉಳಿದುಕೊಳ್ಳುವಂತಾಯಿತು.

ಈ ಮಧ್ಯೆ ತಮ್ಮ ತಂದೆ-ತಾಯಿಯನ್ನು ಹಲವು ದಿನಗಳ ಕಾಲ ನೋಡದಿದ್ದರಿಂದ, ಸಲ್ಮಾನ್ ಖಾನ್ ಬಹಳ ಟೆನ್ಶನ್ ಆಗಿದ್ದರು. ಈ ಕುರಿತು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದರು. ಯಾವಾಗ, ಲಾಕ್‌ಡೌನ್ ಸ್ವಲ್ಪ ಸಡಿಲಗೊಂಡಿತೋ, ಸಲ್ಮಾನ್ ಸದ್ದಿಲ್ಲದೆ ಮುಂಬೈಗೆ ಹೋಗಿ, ಅಲ್ಲಿನ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ತಮ್ಮ ತಂದೆ-ತಾಯಿಯನ್ನು ಭೇಟಿ ಮಾಡಿ, ಪನ್ವೇಲ್‌ಗೆ ವಾಪಸ್ಸಾಗಿದ್ದಾರೆ. ತಂದೆ-ತಾಯಿಯನ್ನು ಭೇಟಿಯಾದ ಸಂದರ್ಭದಲ್ಲಿ, ಸಲ್ಮಾನ್ ಖಾನ್ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದರಂತೆ.

ಇದೀಗ ತಮ್ಮ ಫಾರ್ಮ್ ಹೌಸ್‌ಗೆ ಮರಳಿರುವ ಅವರು, ಲಾಕ್‌ಡೌನ್ ಪೂರ್ತಿ ತೆರವಾಗಿ, ಚಿತ್ರೀಕರಣ ಪ್ರಾರಂಭವಾಗುವವರೆಗೂ ಅಲ್ಲಿದ್ದು, ಮುಂಬೈಗೆ ವಾಪಸ್ಸಾಗಲಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net