ಬಾಲಿವುಡ್ ಭಾಯ್‌ಜಾನ್‌ಗೆ ಏನಾಗಿದೆ? ಸಲ್ಮಾನ್ ಖಾನ್ ಹೊಸ ಲುಕ್ ನೋಡಿ ಕಳವಳ ವ್ಯಕ್ತಪಡಿಸಿದ ಅಭಿಮಾನಿಗಳು! Salman Khan

Salman Khan (ಚಿತ್ರ X)
Salman Khan (ಚಿತ್ರ X)
Published on
Salman Khan: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಇತ್ತೀಚಿನ ಸಾರ್ವಜನಿಕ ಪ್ರದರ್ಶನವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಏನಿದು ಘಟನೆ?

ಮುಂಬೈನ ಸ್ಲಮ್ ರಿಹ್ಯಾಬಿಲಿಟೇಶನ್ ಅಥಾರಿಟಿ (SRA) ಕಚೇರಿಯಲ್ಲಿ ಜುಲೈ 17 ರಂದು ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮವೊಂದರಲ್ಲಿ ನಟ ಸಲ್ಮಾನ್ ಖಾನ್ ಭಾಗವಹಿಸಿದ್ದರು. ಅಲ್ಲಿನ ಅತ್ಯಾಧುನಿಕ ಡೇಟಾ ಕಲೆಕ್ಷನ್ ಮತ್ತು ವೆರಿಫಿಕೇಶನ್ ಸಪೋರ್ಟ್ ಸೆಂಟರ್ ಅನ್ನು ಅವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಲ್ಮಾನ್ ಅವರ ದೃಶ್ಯಗಳು ತಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಪ್ರಾರಂಭಿಸಿದವು.
ಬದಲಾದ ನೋಟ, ಅಭಿಮಾನಿಗಳಲ್ಲಿ ಆತಂಕ
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಟ ಸಲ್ಮಾನ್​ ಖಾನ್​ ತುಂಬಾ ತೆಳ್ಳಗೆ ಕಾಣಿಸಿಕೊಂಡಿದ್ದಾರೆ. ಕ್ಲೀನ್-ಶೇವ್ ಮಾಡಿರುವ ಅವರ ಈ ಹೊಸ ಲುಕ್ ಹಾಗೂ ಆಯಾಸವಾದಂತಹ ಅವರ ಕಣ್ಣುಗಳು ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದಾಗ್ಯೂ, ಕಾರ್ಯಕ್ರಮದಲ್ಲಿ ತಿಳಿ ಬಣ್ಣದ ಶರ್ಟ್ ಮತ್ತು ಬ್ಲೂ ಜೀನ್ಸ್ ಧರಿಸಿದ್ದ ಅವರು ಅಲ್ಲಿದ್ದ ಜನರೊಂದಿಗೆ ಸಂವಹನ ನಡೆಸುತ್ತಿದ್ದು, ಅವರ ಮುಖದಲ್ಲಿನ ಬದಲಾವಣೆಗಳು ನೆಟ್ಟಿಗರ ಗಮನ ಸೆಳೆದಿದೆ.
ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆಯೆ ಅನೇಕ ಬಳಕೆದಾರರ ಗಮನ ಸೆಳೆಯಿತು. ಬಳಕೆದಾರರೊಬ್ಬರು ಇವರು ನಿಜವಾಗಿಯೂ ಸಲ್ಮಾನ್ ಖಾನ್ ಅವರೇ? ಅವರ ಆರೋಗ್ಯ ಕೈಕೊಟ್ಟಿದೆಯೇ? ಓ ಮೈ ಗಾಡ್ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ಸಲ್ಮಾನ್ ಖಾನ್ ಅವರಿಗೆ ವಯಸ್ಸಾಗುತ್ತಿದೆ. ಅವರಿಗೆ ಈಗ 60 ವರ್ಷ. ಸಮಯ ಯಾರಿಗಾಗಿಯೂ ಕಾಯುವುದಿಲ್ಲ. ಎಷ್ಟೇ ದೊಡ್ಡ ತಾರೆಯಾಗಿದ್ದರೂ ವಯಸ್ಸು ತನ್ನ ಪ್ರಭಾವ ಬೀರೇ ತೀರುತ್ತದೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಅವರ ಕಣ್ಣುಗಳಲ್ಲಿ ತೀವ್ರ ಆಯಾಸ ಎದ್ದು ಕಾಣುತ್ತಿದೆ, ಅವರು ಯಾವುದಾದರೂ ಅನಾರೋಗ್ಯದಿಂದ ಬಳಲುತ್ತಿದ್ದಾರೆಯೇ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸಲ್ಮಾನ್ ಮುಂದಿನ ಚಿತ್ರ

ಚಿತ್ರರಂಗದ ವಿಚಾರಕ್ಕೆ ಬಂದರೆ, ಸಲ್ಮಾನ್ ಖಾನ್ ಅವರ ಮುಂಬರುವ ಬಹುನಿರೀಕ್ಷಿತ ವಾರ್ ಡ್ರಾಮಾ ಚಿತ್ರ ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್ ಬಿಡುಗಡೆಗೆ ಸಿದ್ಧವಾಗುತ್ತಿದೆ. ಅಪೂರ್ವ ಲಾಖಿಯಾ ನಿರ್ದೇಶನದ ಈ ಚಿತ್ರವು 2020 ರಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಗಲ್ವಾನ್ ಕಣಿವೆ ಸಂಘರ್ಷದ ಕಥೆಯನ್ನು ಆಧರಿಸಿದೆ. ಈ ಚಿತ್ರವು ಏಪ್ರಿಲ್ 17 ರಂದು ತೆರೆಕಾಣಬೇಕಿತ್ತಾದರೂ, ಸೂಕ್ಷ್ಮ ಭೂರಾಜಕೀಯ ವಿಷಯ ವಸ್ತುವನ್ನು ಹೊಂದಿರುವುದರಿಂದ ಇದರ ಬಿಡುಗಡೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net