

Salman Khan : ಸಲ್ಮಾನ್ ಖಾನ್ ಅವರು ಬಾಲಿವುಡ್ನ ಸ್ಟಾರ್ ಹೀರೋಗಳಲ್ಲಿ ಒಬ್ಬರು. ಪ್ರಪಂಚದಾದ್ಯಂತ ಅನೇಕ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಲ್ಲದೆ, ಬಿಗ್ಬಾಸ್ ರಿಯಾಲಿಟಿ ಶೋ ಮೂಲಕ ಮನೆ ಮನಗಳನ್ನು ತಲುಪಿದ್ದಾರೆ.
ನಿಮಗೆಲ್ಲರಿಗೂ ಗೊತ್ತಿರುವಂತೆ ಸಿನಿಮಾ ಜೀವನ ಅಂದ್ರೆ ಬಿಜಿ ಜೀವನ. ಹಗಲು-ರಾತ್ರಿ ಎನ್ನದೇ ಶೂಟಿಂಗ್ನಲ್ಲಿ ಭಾಗಿಯಾಗುವ ಕಲಾವಿದರಿಗೆ ಕೆಲವೊಮ್ಮೆ ನಿದ್ರೆಗೂ ಸಮಯ ಇರುವುದಿಲ್ಲ. ಆದರೆ, ದಿನಕ್ಕೆ ಕನಿಷ್ಠ 8 ಗಂಟೆಗಳ ಕಾಲ ನಿದ್ರಿಸಲೇಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ, ಸಲ್ಲು ಭಾಯ್ ದಿನಕ್ಕೆ ಕೇವಲ ಎರಡರಿಂದ ಮೂರು ಗಂಟೆಗಳ ಕಾಲ ಮಾತ್ರ ನಿದ್ದೆ ಮಾಡ್ತಾರಂತೆ. ಈ ವಿಚಾರವನ್ನು ಸ್ವತಃ ಸಲ್ಮಾನ್ ಅವರೇ ಹೇಳಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಅವರು ತಮ್ಮ ಸೋದರಳಿಯ ಅರ್ಹಾನ್ ಖಾನ್ ಆಯೋಜಿಸಿದ್ದ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಲ್ಲು ಅವರು ಹಲವು ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜೈಲಿನಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಂಡರು.
ನಾನು ಸಾಮಾನ್ಯವಾಗಿ ದಿನಕ್ಕೆ ಎರಡು ಗಂಟೆ ಮಾತ್ರ ನಿದ್ದೆ ಮಾಡುತ್ತೇನೆ. ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಏಳರಿಂದ ಎಂಟು ಗಂಟೆಗಳ ಕಾಲ ಮಲಗುತ್ತೇನೆ. ಕೆಲವೊಮ್ಮೆ ಶೂಟಿಂಗ್ ವೇಳೆ ಬಿಡುವು ಸಿಕ್ಕರೂ ಖುರ್ಚಿಯ ಮೇಲೆಯೇ ಮಲಗುತ್ತೇನೆ. ಬೇರೇನೂ ಇಲ್ಲ ಅನ್ನಿಸಿದಾಗ ಮಾತ್ರ ನಿದ್ದೆ ಮಾಡುತ್ತೇನೆ. ಜೈಲಿನಲ್ಲಿದ್ದಾಗ ತುಂಬಾ ನಿದ್ದೆ ಮಾಡುತ್ತಿದ್ದೆ. ಏನೂ ಮಾಡಲಾಗದ ಅಸಹಾಯಕ ಸ್ಥಿತಿ ನಿರ್ಮಾಣವಾಗಿತ್ತು ಎಂದು ಸಲ್ಮಾನ್ ಹೇಳಿದರು.
ಕೆಲಸ ಮತ್ತು ಕುಟುಂಬದ ವಿಷಯಕ್ಕೆ ಬಂದರೆ, ಕೆಲವೊಮ್ಮೆ ಕಷ್ಟಪಡಬೇಕಾಗುತ್ತದೆ ಎನ್ನುತ್ತಾರೆ ಸಲ್ಲು. ಕುಟುಂಬ ಮತ್ತು ಸ್ನೇಹಿತರಿಗೆ ಯಾವಾಗಲೂ ಲಭ್ಯವಿರಬೇಕು ಎಂದು ಸಲ್ಲು ಸಲಹೆ ನೀಡಿದರು. 1998ರಲ್ಲಿ ಸಲ್ಮಾನ್ ವಿರುದ್ಧ ಕೃಷ್ಣಮೃಗ ಬೇಟೆಯಾಡಿ ಪ್ರಕರಣ ದಾಖಲಾಗಿದ್ದು ಗೊತ್ತೇ ಇದೆ. 2006ರಲ್ಲಿ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದರೂ ಸಲ್ಮಾನ್ ಕೆಲ ದಿನಗಳ ಕಾಲ ಶಿಕ್ಷೆಯಿಂದ ಪಾರಾಗಿರಲಿಲ್ಲ.
ಸಿನಿಮಾ ವಿಚಾರಕ್ಕೆ ಬಂದರೆ, ಸಲ್ಮಾನ್ ಪ್ರಸ್ತುತ ಎ. ಆರ್.ಮುರುಗದಾಸ್ ನಿರ್ದೇಶನದ ಸಿಕಂದರ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್)