ವಿಶ್ವದ ಮೋಸ್ಟ್​ ಹ್ಯಾಂಡ್​ಸಮ್​ ಪಟ್ಟಿಯಲ್ಲಿ ಹೃತಿಕ್​ಗೆ 5ನೇ ಸ್ಥಾನ: ಟಾಪ್​ 10ರಲ್ಲಿ ಮೊದಲ ಸ್ಥಾನ ಯಾರಿಗೆ? Hrithik Roshan

Hrithik Roshan
Published on

Hrithik Roshan : ಬಾಲಿವುಡ್ ಸೂಪರ್‌ಸ್ಟಾರ್ ಹೃತಿಕ್ ರೋಷನ್ ಮತ್ತೊಮ್ಮೆ ವಿಶ್ವದ ಮೋಸ್ಟ್​ ಹ್ಯಾಂಡ್​ಸಮ್​ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬಾಲಿವುಡ್‌ನ ಗ್ರೀಕ್ ದೇವರು ಎಂದೇ ಕರೆಯಲ್ಪಡುವ ಹೃತಿಕ್​, ಟೆಕ್ನೋ ಸ್ಪೋರ್ಟ್ಸ್ ನಡೆಸಿದ ಸಮೀಕ್ಷೆಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ವಿಶ್ವಪ್ರಸಿದ್ಧ ಕೆ-ಪಾಪ್ ಬ್ಯಾಂಡ್ ಬಿಟಿಎಸ್ ಸದಸ್ಯರಾದ ಕಿಮ್ ಟೇ-ಯಂಗ್ ವಿಶ್ವದ ಮೋಸ್ಟ್​ ಹ್ಯಾಂಡ್​ಸಮ್​ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಬಿಟಿಎಸ್‌ನ ಪ್ರಮುಖ ಗಾಯಕರಲ್ಲಿ ಒಬ್ಬರಾದ ಕಿಮ್ ಟೇ-ಯಂಗ್ 'ವಿ' ಎಂಬ ಹೆಸರಿನಿಂದಲೇ ಪ್ರಸಿದ್ಧರಾಗಿದ್ದಾರೆ. ವಿ ಅವರು ಗಾಯಕನಾಗುವುದರ ಜೊತೆಗೆ ನಟ ಕೂಡ ಆಗಿದ್ದು, ಪ್ರಸ್ತುತ ದಕ್ಷಿಣ ಕೊರಿಯಾದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಹಾಲಿವುಡ್‌ನ ಪ್ರಮುಖ ನಟರಲ್ಲಿ ಒಬ್ಬರಾದ ಬ್ರಾಡ್ ಪಿಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಹಾಲಿವುಡ್‌ನ ಪ್ರಮುಖ ಬ್ರಿಟಿಷ್ ನಟರಲ್ಲಿ ಒಬ್ಬರಾದ ರಾಬರ್ಟ್ ಪ್ಯಾಟಿನ್ಸನ್ ಮೂರನೇ ಸ್ಥಾನದಲ್ಲಿದ್ದರೆ, ಕೆನಡಾದ ನಟ ಮತ್ತು ಮಾಡೆಲ್ ನೋಹ್ ಮಿಲ್ಸ್ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್​ ಟ್ರುಡೋ, ತಮ್ಮ ಯೌವ್ವನದ ನೋಟ ಮತ್ತು ವರ್ಚಸ್ಸಿನಿಂದಲೇ ಆಗಾಗ ಮೆಚ್ಚುಗೆ ಪಡೆಯುತ್ತಿದ್ದಾರೆ. ಈ ಕಾರಣಕ್ಕಾಗಿ ಈ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ. ಮಾರ್ವೆಲ್ ಸಿನೆಮ್ಯಾಟಿಕ್ ಯೂನಿವರ್ಸ್‌ನಲ್ಲಿ ಕ್ಯಾಪ್ಟನ್ ಅಮೆರಿಕ ಎಂದೇ ಪ್ರಸಿದ್ಧರಾಗಿರುವ ಕ್ರಿಸ್ ಇವಾನ್ಸ್ 7ನೇ ಸ್ಥಾನದಲ್ಲಿದ್ದಾರೆ.

ಡಿಸಿ ಯೂನಿವರ್ಸ್‌ನಲ್ಲಿ ಸೂಪರ್‌ಮ್ಯಾನ್ ಮತ್ತು ದಿ ವಿಚರ್‌ನಲ್ಲಿ ಜೆರಾಲ್ಟ್ ಆಫ್ ರಿವಿಯಾ ಪಾತ್ರಗಳಿಗೆ ಹೆಸರುವಾಸಿಯಾದ ಬ್ರಿಟಿಷ್ ಸೂಪರ್‌ಸ್ಟಾರ್ ಹೆನ್ರಿ ಕ್ಯಾವಿಲ್ 8ನೇ ಸ್ಥಾನದಲ್ಲಿದ್ದರೆ, ಹಾಲಿವುಡ್ ಐಕಾನ್ ಆಗಿರುವ ಟಾಮ್​ ಕ್ರೂಸ್ 9ನೇ ಸ್ಥಾನದಲ್ಲಿದ್ದಾರೆ. ದಿ ಹ್ಯಾಂಗೊವರ್, ಸಿಲ್ವರ್ ಲೈನಿಂಗ್ಸ್ ಪ್ಲೇಬುಕ್, ಅಮೆರಿಕನ್ ಸ್ನಿಫರ್ ಮತ್ತು ಅಮೆರಿಕನ್ ಹಸಲ್ ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿರುವ ಬ್ರಾಡ್ಲಿ ಕೂಪರ್ ಕೊನೆಯ ಹಾಗೂ 10ನೇ ಸ್ಥಾನದಲ್ಲಿದ್ದಾರೆ.

ಅಂದಹಾಗೆ ಹೃತಿಕ್ ರೋಷನ್ ಅವರು ನಟಿಸಿರುವ ವಾರ್​-2 ಸಿನಿಮಾ ಆಗಸ್ಟ್​ 15ಕ್ಕೆ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಅಯಾನ್ ಮುಖರ್ಜಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಜೂನಿಯರ್​ ಎನ್​ಟಿಆರ್​ ಮತ್ತು ಕಿಯಾರಾ ಅಡ್ವಾಣಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ ಹೃತಿಕ್ ರೋಷನ್ ನಟಿಸಿರುವ 'ಕ್ರಿಶ್' ನ ನಾಲ್ಕನೇ ಭಾಗಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಸಿನಿಮಾಗಳ ನಡುವೆ ಹೃತಿಕ್ ರೋಷನ್ ಅವರ ಕುರಿತಾದ ಸಾಕ್ಷ್ಯಚಿತ್ರ 'ದಿ ರೋಶನ್ಸ್' ಎಂಬ ಶೀರ್ಷಿಕೆಯಲ್ಲಿ ನೆಟ್‌ಫ್ಲಿಕ್ಸ್‌ಗೆ ಬರುತ್ತಿದೆ ಎಂಬ ಮಾಹಿತಿಯೂ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net