ವೈರಲ್ ಆಗಿರುವ ಪೋಸ್ಟ್ ಪ್ರಕಾರ, ಸಲ್ಮಾನ್ ಖಾನ್ ಅವರ ಕುಟುಂಬಸ್ಥರು ತೀವ್ರ ಆತಂಕಕ್ಕಿಡಾಗಿದ್ದು, ಅವರನ್ನು ಚಿಕಿತ್ಸೆಗಾಗಿ ತಕ್ಷಣವೇ ಅಮೆರಿಕಕ್ಕೆ ತೆರಳುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ, ಖಾನ್ ತಮ್ಮ ಮುಂಬರುವ ಸಿನಿಮಾ ಪ್ರಾಜೆಕ್ಟ್ಗಳು ಮತ್ತು ವೃತ್ತಿಪರ ಬದ್ಧತೆಗಳ ಮೇಲೆ ಸಂಪೂರ್ಣ ಗಮನ ಹರಿಸಲು ನಿರ್ಧರಿಸಿದ್ದು, ಕುಟುಂಬದ ಮನವಿಯನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.