ಆಮೀರ್​ ಖಾನ್​ಗಾಗಿ ಒಂದು ದಿನ ಸಮಯ ನೀಡಲಿದ್ದಾರೆ ಸಲ್ಮಾನ್​ ಖಾನ್: ಏಕಿರಬಹುದು?

Amir Salman
Published on

ಮುಂಬೈ: 30 ವರ್ಷಗಳ ಸುದೀರ್ಘ ಸಿನಿಪಯಣದಲ್ಲಿ ಮೊದಲ ಬಾರಿಗೆ ಖಾನ್​ ತ್ರಯರು ಆಮೀರ್ ಖಾನ್​ ನಟಿಸುತ್ತಿರುವ ಲಾಲ್​ಸಿಂಗ್ ಛಡ್ಡಾ ಸಿನಿಮಾದಲ್ಲಿ ಒಂದಾಗಿದ್ದಾರೆ. ಹೌದು, ಈಗಾಗಲೇ ಶಾರುಖ್​ ಖಾನ್ ಅವರ ದೃಶ್ಯಕ್ಕೆ ಸ್ವತಃ ಆಮೀರ್ ಖಾನ್​ ನಿರ್ದೇಶನ ಮಾಡಿದ್ದಾರೆ. ಇದೀಗ ಸಲ್ಮಾನ್​ ಖಾನ್ ಸಹ ಈ ಚಿತ್ರದಲ್ಲಿ ನಟಿಸಲಿದ್ದಾರೆ.

ಹಲವು ಸಿನಿಮಾಗಳಲ್ಲಿ ಬಿಜಿಯಾಗಿರುವ ನಟ ಸಲ್ಮಾನ್ ಖಾನ್, ಲಾಲ್​ಸಿಂಗ್ ಛಡ್ಡಾ ಚಿತ್ರದ ಸಲುವಾಗಿ ಒಂದಿಡಿ ದಿನವನ್ನು ಆಮೀರ್​ಗೆ ನೀಡಿದ್ದಾರೆ. ಈಗಾಗಲೇ ಬಹುತೇಕ ಸಿನಿಮಾದ ಶೂಟಿಂಗ್​ ಮುಕ್ತಾಯವಾಗಿದ್ದು, ಇದೀಗ ಸಲ್ಮಾನ್​ ಜತೆಯಾಗಿದ್ದಾರೆ.

ಸಲ್ಮಾನ್​ ಖಾನ್ ಬಾಗದ ಶೂಟಿಂಗ್​ ಸಂಪೂರ್ಣವಾಗಿ ಸ್ಟುಡಿಯೋವೊಂದರಲ್ಲಿ ನಡೆಯಲಿದ್ದು, ತಮ್ಮ ಪಾಲಿನ ಚಿತ್ರೀಕರಣವನ್ನು ಮುಗಿಸಿಯೇ ಸಲ್ಮಾನ್ ಆಚೆ ಬರಲಿದ್ದಾರೆ. ಅಂದಹಾಗೆ, ಲಾಲ್​ಸಿಂಗ್ ಛಡ್ಡಾ ಸಿನಿಮಾದಲ್ಲಿ ಕೇವಲ ಮೂರರಿಂದ ನಾಲ್ಕು ನಿಮಿಷಗಳ ಅವಧಿ ಮಾತ್ರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net