ರಾಮಾಂಜನೇಯ ಅವತಾರದಲ್ಲಿ ದರ್ಶನ್​, ಸುದೀಪ್​; ಕರಣ್ ಕುಂಚದಲ್ಲಿ ಕಮಾಲ್

collage
Published on

ಬೆಂಗಳೂರು: ಅಭಿಮಾನಿಗಳ ಬಹುದೊಡ್ಡ ಆಸೆ ಸುದೀಪ್ ಮತ್ತು ದರ್ಶನ್ ಒಂದಾಗಬೇಕೆಂಬುದು. ಆದರೆ, ಆ ಕಾಲ ಅದ್ಯಾವಾಗ ಬರುತ್ತೋ ಎಂದು ಚಾತಕ ಪಕ್ಷಿಯಂತೆ ಕಾದಿದ್ದೇ ಬಂತು. ಆ ಬಗ್ಗೆ ಯಾವುದೇ ಮಾತಿಲ್ಲ, ಕಥೆಯಿಲ್ಲ. ಇದೀಗ ಇದೇ ಇಬ್ಬರು ಸ್ಟಾರ್​ಗಳು ಒಂದೇ ಫ್ರೇಮ್​ನಲ್ಲಿ ಸೆರೆಯಾಗಿದ್ದಾರೆ. ಅದೂ ರಾಮ ಆಂಜನೇಯನಾಗಿ!

ಹೌದು, ಆರ್ಟಿಸ್ಟ್ ಕರಣ್​ ಆಚಾರ್ಯ ಅಂಥದ್ದೊಂದು ಫೋಟೋವನ್ನು ತಮ್ಮ ಕುಂಚದ ಮೂಲಕ ಬಿಡಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಪ್ರಿನ್ಸ್ ಮಂಜು ಎಂಬುವವರು ಕರಣ್ ಆಚಾರ್ಯ ಅವರ ಸೋಷಿಯಲ್ ಮೀಡಿಯಾಕ್ಕೆ ದರ್ಶನ್ ಮತ್ತು ಸುದೀಪ್ ಜತೆಗಿರುವ ಫೋಟೋ ಕಳುಹಿಸಿ ರಾಮ ಮತ್ತು ಆಂಜನೇಯ ಅವತಾರ ನೀಡುವಂತೆ ಕೋರಿದ್ದರು. ಅಭಿಮಾನಿಯ ಕೋರಿಕೆಯನ್ನು ಕರಣ್ ಈಡೇರಿಸಿದ್ದಾರೆ.

ಥೇಟ್ ರಾಮ ಮತ್ತು ಆಂಜನೇಯನ ಅವತಾರದಲ್ಲಿ ದರ್ಶನ್ ಮತ್ತು ಸುದೀಪ್ ಎದುರಾಗಿದ್ದಾರೆ. ಸದ್ಯ ಈ ಫೋಟೋಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮತ್ತೆ ಈ ಇಬ್ಬರ ಒಂದಾಗಬೇಕು ಎಂದು ಸಾಕಷ್ಟು ಅಭಿಮಾನಿಗಳು ಸಂದೇಶಗಳ ಮೂಲಕ ರವಾನಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net