ಡಾ. ರಾಜ್​ ಜಯಂತಿ ನಿಮಿತ್ತ ‘ಸಲಗ’ ತಂಡದಿಂದ ಸಿನಿಮಾ ಕಾರ್ಮಿಕರಿಗೆ ಅವಶ್ಯಕ ಸಾಮಗ್ರಿ ವಿತರಣೆ

WhatsApp Image 2020-04-24 at 3.48.40 PM
Published on

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಕೆಲಸಗಳು ಸ್ಥಗಿತವಾದ ಬೆನ್ನಲ್ಲೇ ಚಿತ್ರೋದ್ಯಮವನ್ನೇ ನಂಬಿ ಬದುಕುತ್ತಿದ್ದ ಕೂಲಿಕಾರ್ಮಿಕರು ಅತಂತ್ರರಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಸಾಕಷ್ಟು ಸಂಘಸಂಸ್ಥೆಗಳು ನೆರವಿಗೆ ನಿಂತಿವೆ. ವೈಯಕ್ತಿಕವಾಗಿ ಮುಂದೆ ಬಂದ ಕಲಾವಿದರು, ಸಿನಿಮಾ ಕಾರ್ಮಿಕರಿಗೆ ನೆರವು ನೀಡುತ್ತಿದ್ದಾರೆ. ಹಾಗೆಯೇ ಇದೀಗ ‘ಸಲಗ’ ಚಿತ್ರತಂಡವೂ ಡಾ. ರಾಜ್​ ಜಯಂತಿ ನಿಮಿತ್ತ ಅವಶ್ಯಕ ಸಾಮಾಗ್ರಿಗಳನ್ನು ವಿತರಣೆ ಮಾಡಿದೆ. ಚಿತ್ರದ ನಾಯಕ ಮತ್ತು ನಿರ್ದೇಶಕ ದುನಿಯಾ ವಿಜಯ್​, ಡಾಲಿ ಧನಂಜಯ್, ನಿರ್ಮಾಪಕ ಕೆ.ಪಿ. ಶ್ರೀಕಾಂತ್​ ಸೇರಿ ನೂರಾರು ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net