ಸಲಗ ಗೆಲುವಿನ ಸಂಭ್ರಮ; ನಡೆಯಲಿದೆ ವಿಜಯಯಾತ್ರೆ

Salaga
Published on

‘ಸಲಗ’ ಗೆದ್ದಿದೆ ಎಂಬ ಖುಷಿಯಲ್ಲಿ ‘ದುನಿಯಾ’ ವಿಜಯ್ ಮತ್ತು ತಂಡದವರು ಇತ್ತೀಚೆಗಷ್ಟೇ ಕೇಕು ಕತ್ತರಿಸಿ ಖುಷಿಪಟ್ಟಿದ್ದರು. ಈ ಖುಷಿಯನ್ನು ಇನ್ನಷ್ಟು ಜನಗೊಂದಿಗೆ ಹಂಚಿಕೊಳ್ಳಲು ಮತ್ತು ಜನರಿಗೆ ಥ್ಯಾಂಕ್ಸ್ ಹೇಳಲು, ಚಿತ್ರತಂಡವು ‘ಸಲಗ ಸಂಭ್ರಮ’ ಎಂಬ ವಿಜಯಯಾತ್ರೆಯನ್ನು ಆಯೋಜಿಸಿದೆ. ‘ಸಲಗ ಸಂಭ್ರಮ’ ಶುರುವಾಗುವುದು ರಾಜ್ಯೋತ್ಸವ ದಿನದಂದು. ಅದರ ಹಿಂದಿನ ದಿನ ಅಂದರೆ ಅ.31ರಂದು ಮೈಸೂರಿನ ಸಂಗಮ್ ಚಿತ್ರಮಂದಿರದಲ್ಲಿ ಸಂಜೆ 6.30ಕ್ಕೆ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ.

ನ.1ರಿಂದು ಮೈಸೂರಿನ ಗಾಯತ್ರಿ ಚಿತ್ರಮಂದಿರದಿಂದ ಪ್ರಾರಂಭವಾಗುವ ಈ ‘ಸಲಗ ಸಂಭ್ರಮ’, ಮಂಡ್ಯ, ಮದ್ದೂರಿನಲ್ಲಿ ಮುಂದುವರೆದು, ಚನ್ನಪಟ್ಟಣದಲ್ಲಿ ಅಂತ್ಯವಾಗಲಿದೆ. ಈ ನಗರಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳಿಗೆ ಚಿತ್ರತಂಡ ಭೇಟಿ ಕೊಡಲಿದೆ. ನ.2ತಂದು ಕನಕಪುರ ಮತ್ತು ಮಳವಳ್ಳಿಯತ್ತ ಪ್ರಯಾಣ ಬೆಳೆಸಿದರೆ, ನ.4ರಂದು ತುಮಕೂರಿನ ಮಾರುತಿ, ಚಿತ್ರದುರ್ಗದ ಬಸವೇಶ್ವರ ಮತ್ತು ದಾವಣಗೆರೆಯ ಅಶೋಕ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟು, ನ.5ರಂದು ಈ ಯಾತ್ರೆಯನ್ನು ಹುಬ್ಬಳ್ಳಿಯ ಸುಧಾ ಚಿತ್ರಮಂದಿರದಲ್ಲಿ ಮುಗಿಸಲಿದೆ. ಈ ಸಂಭ್ರಮದಲ್ಲಿ ವಿಜಯ್, ಸಂಜನಾ ಆನಂದ್, ಧನಂಜಯ್, ‘ಕಾಕ್ರೋಚ್’ ಸುಧಿ ಮುಂತಾದವರು ಭಾಗಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net