ಸಲಗದಲ್ಲಿ ಸಿದ್ದಿ ಸಾಂಗ್; ಏ.5ಕ್ಕೆ ಪ್ರಮೋಷನಲ್ ಹಾಡು ಬಿಡುಗಡೆ

Salaga
Published on

ಬೆಂಗಳೂರು: ‘ದುನಿಯಾ’ ವಿಜಯ್ ಅಭಿನಯದ ಮತ್ತು ನಿರ್ದೇಶನದ ‘ಸಲಗ’ ಚಿತ್ರಕ್ಕೆ ಸಿದ್ದಿ ಜನಾಂಗದ ಗಿರಿಜಾ ಪರಶುರಾಮ್ ಸಿದ್ದಿ ಮತ್ತು ಗೀತಾ ಸಿದ್ದಿ ಹಾಡಿರುವ ವಿಷಯ ಗೊತ್ತಿದ್ದೇ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರಗೀತೆಯೊಂದನ್ನು ಸಿದ್ದಿ ಜನಾಂಗದವರಿಂದ ಹಾಡಿಸಿದ್ದು ಕೆಲವು ದಿನಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು.

ಈಗ ಆ ಹಾಡಿನ ಚಿತ್ರೀಕರಣ ಇತ್ತೀಚೆಗೆ ಬೆಂಗಳೂರಿನ ವರ್ಲ್ಡ್ ಟ್ರೇಡ್ ಸೆಂಟರ್ ಮತ್ತು ಶೆರ್ಟನ್ ಹೋಟೆಲ್​ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದೊಂದು ಪ್ರಮೋಷನಲ್ ಹಾಡಾಗಿದ್ದು, ಈ ಹಾಡಿನಲ್ಲಿ ಸಿದ್ದಿ ಜನರೊಟ್ಟಿಗೆ ಮಾಸ್ ಸ್ಟೈಲ್​ನಲ್ಲಿ ವಿಜಯ್ ಕಾಣಿಸಿಕೊಂಡಿದ್ದಾರಂತೆ. 70 ನೃತ್ಯಕಲಾವಿದರು ಈ ಹಾಡಿಗೆ ಸ್ಟೆಪ್ ಹಾಕಿದ್ದು, ಮುರಳಿ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಈ ಹಾಡು ಮೂಡಿಬಂದಿದೆ. ಈ ಹಾಡಿನಲ್ಲಿ ಹಲವು ಗೆಟಪ್​ಗಳಲ್ಲಿ ವಿಜಯ್ ಕಾಣಿಸಿಕೊಂಡಿದ್ದು, ಈ ಹಾಡು ಹೇಗೆ ಮೂಡಿಬಂದಿದೆ ಎಂದು ಗೊತ್ತಾಗುವುದಕ್ಕೆ ಏಪ್ರಿಲ್ 05ರವರೆಗೂ ಕಾಯಬೇಕು. ಅಂದು ಈ ಹಾಡು ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಲಿದೆ.

‘ಸಲಗ’ ಚಿತ್ರವು ಬಿಡುಗಡೆಗೆ ಸಿದ್ಧವಿದ್ದು, ಮುಂದಿನ ತಿಂಗಳು ಹೊಸಪೇಟೆಯಲ್ಲಿ ನಡೆಯಲಿರುವ ಪ್ರೀ-ರಿಲೀಸ್ ಇವೆಂಟ್ ವೇಳೆ, ಚಿತ್ರದ ಬಿಡುಗಡೆ ದಿನಾಂಕ ಹೊರಬೀಳಲಿದೆ. ಕೆ.ಪಿ. ಶ್ರೀಕಾಂತ್ ನಿರ್ವಿುಸಿರುವ ಈ ಚಿತ್ರದಲ್ಲಿ ವಿಜಯ್ಗೆ ನಾಯಕಿಯಾಗಿ ಸಂಜನಾ ಆನಂದ್ ನಟಿಸಿದ್ದು, ಮಿಕ್ಕಂತೆ ಧನಂಜತ್, ಸುಧಿ, ಯಶ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಚರಣ್​ರಾಜ್ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net